ವಿಜಯಪುರ

ಶ್ರೀಶೈಲ ಪಾದ ಯಾತ್ರಾರ್ಥಿಗಳ 56ನೇ ವರ್ಷಾಚರಣೆ, ಹಿರೇಮಸಳಿಯಲ್ಲಿ ಉಡಿ ತುಂಬುವ ಕಾರ್ಯಕ್ರಮ

ಇಂಡಿ: ಶ್ರೀಶೈಲ ಶ್ರೀ ಮಲ್ಲಿಕಾರ್ಜುನ ಪಾದ ಯಾತ್ರಾರ್ಥಿಗಳ 56ನೇ ವರ್ಷಾಚರಣೆ ಹಿನ್ನೆಲೆ ಸೋಮವಾರ ಹಿರೇಮಸಳಿ ಗ್ರಾಮದಲ್ಲಿ ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.
ನೂರಾರು ಸುಮಂಗಲಿಯರ ಉಡಿ ತುಂಬುವ ಕಾರ್ಯಕ್ರಮ ನೆರವೇರಿಸಿದ ಜೈನಾಪುರದ ಷಬ್ರ ರೇಣುಕ ಶಿವಾಚಾರ್ಯರು, ಹಿರೇಮಸಳಿಯಲ್ಲಿ ಮಲ್ಲಿಕಾರ್ಜುನನ ಭಕ್ತಿ ಭಾವ ತುಂಬಿ ತುಳಕುತ್ತಿದೆ. 56 ವರ್ಷದಿಂದ ಪಾದಯಾತ್ರೆ ಹಮ್ಮಿಕೊಂಡು ಬಂದಿರುವ ಇಲ್ಲಿನ ಭಕ್ತರಿಗೆ ಸದಾ ಒಳ್ಳೆಯದಾಗಲಿ ಎಂದು ಹಾರೈಸಿ ಉಡಿ ತುಂಬುವ ಕಾರ್ಯಕ್ರಮ ನೆರವೇರಿಸಲಾಗಿದೆ ಎಂದರು.
ರೈತಾಪಿ ಜನರಿಗೆ ಸಾಕಷ್ಟು ಸುಖ, ಸಂತೋಷ, ಸಮೃದ್ಧಿಯಾಗಲೆಂದು ಸುಮಂಗಲಿಯರಿಗೆ ಉಡಿ ತುಂಬಲಾಗಿದೆ. ತಾಯಂದಿರಿಗೆ ಉಡಿ ತುಂಬುವುದರಿಂದ ದೇಶಕ್ಕೆ ಒಳಿತಾಗಲಿದೆ. ಹೆಣ್ಣು ಮಕ್ಕಳಲ್ಲಿ ಉತ್ತಮ ಸಂಸ್ಕೃತಿ ಬೆಳೆಯುತ್ತದೆ. ಮಹಿಳೆ ಸುಂಸ್ಕೃತಳಾದರೆ ಇಡೀ ಕುಟುಂಬ, ಸಮಾಜ ಸುಂಸ್ಕೃತವಾಗಲಿದೆ. ಹೀಗಾಗಿ ಈ ಭಾಗದಲ್ಲಿ ಉಡಿ ತುಂಬುವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗಿದೆ ಎಂದರು.
ಶಿಕ್ಷಕ ಐ.ಎಸ್. ಮಾಶ್ಯಾಳ, ಚಿದಾನಂದ ಭಾವಿಕಟ್ಟಿ, ಅಪ್ಪಾಸಿ ಬೆನಕನಹಳ್ಳಿ, ಸಂತೋಷ ದೇವರಮನಿ, ಶ್ರೀಶೈಲ ನಂದಿಕೋಲ, ಮಹಾಂತೇಶ ಮಠಪತಿ, ಮಲ್ಲಿಕಾರ್ಜುನ ಭಾವಿಕಟ್ಟಿ ಮತ್ತಿತರರಿದ್ದರು.

error: Content is protected !!