ವಿಜಯಪುರ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆ, ಪಂಚರಾಜ್ಯಗಳ ಚುನಾವಣೆ ಬಳಿಕ ಕಾಂಗ್ರೆಸ್ ಹತಾಶ, ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ

ವಿಜಯಪುರ: ಪಂಚರಾಜ್ಯಗಳ ಚುನಾವಣೆ ನಂತರ ಕಾಂಗ್ರೆಸ್ ಹತಾಶೆಗೊಂಡಿದೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವ ಹಗಲು ಗನಸು ಕಾಣುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಲೇವಡಿ ಮಾಡಿದರು.

ಉತ್ತರ ಪ್ರದೇಶದಲ್ಲಿ ಸ್ವತಃ ಪ್ರಿಯಾಂಕಾ ಗಾಂಧಿ ಅವರೇ ನೇತೃತ್ವ ವಹಿಸಿದ್ದರು. ಆದಾಗ್ಯೂ ಅಧಿಕಾರ ಗಿಟ್ಟಿಸಿಕೊಳ್ಳಲಾಗಲಿಲ್ಲ. ಅಧಿಕಾರದಲ್ಲಿದ್ದ ಪಂಜಾಬ ದಲ್ಲೂ ಅಧಿಕಾರ ಕಳೆದುಕೊಂಡಿತು. ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತು. ಇಂಥದರಲ್ಲಿ ಕರ್ನಾಟಕದಲ್ಲಿ ಹಗಲು ಗನಸು ಕಾಣುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿ ಇಲ್ಲ:
ಮಲ್ಲಿಕಾರ್ಜುನ ಖರ್ಗೆ, ಡಾ. ಪರಮೇಶ್ವರ ದಲಿತರಿಗೆ ಸಿಎಂ ಸ್ಥಾನ ಕೊಡುವ ಕೂಗು ಬೇರೆ ಬೇರೆಯವರ ಮುಖಾಂತರ ಹಾಕಿಸುತ್ತಿದ್ದಾರೆ. ಡಿಕೆಶಿ ನನಗೆ ಕೊಡಿ ಎನ್ನುತ್ತಿದ್ದಾರೆ‌. ಸಿದ್ದರಾಮಯ್ಯ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಗುಟುರು ಹಾಕುತ್ತಿದ್ದಾರೆ‌.
ನೀತಿ, ನಿಯತ್ತು, ನೇತೃತ್ವ ಬಿಜೆಪಿಯಲ್ಲಿದೆ‌ ರಾಷ್ಟ್ರ, ಜನ ಹಿತದ ನೀತಿ ನಮ್ಮ ಬಳಿ ಇದೆ‌. ಮೋದಿ ನಾಯಕತ್ವ ಇದೆ‌. ಈ ಹಿನ್ನೆಲೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಸಿ.ಟಿ. ರವಿ ಹೇಳಿದರು.

ಈಶ್ವರಪ್ಪ ರಾಜೀನಾಮೆ ವಿಚಾರ:
ಸಂತೋಷ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂರೆ
ಕೆ.ಎಸ್. ಈಶ್ವರಪ್ಪ ರಾಜೀನಾಮೆ ಸ್ವಾಗತಿಸುತ್ತೇನೆ. ನೈತಿಕ ಹಿನ್ನೆಲೆ ಯಲ್ಲಿ ರಾಜೀನಾಮೆ ನೀಡಿದ್ದಾರೆ‌. ಈ ಹಿಂದೆ ಎಲ್. ಕೆ. ಅಡ್ವಾಣಿ ಅವರು ಡೈರಿಯೊಂದರಲ್ಲಿ ಕೇವಲ ಎಲ್ ಕೆಇ ಎಂದು ಬರೆದ ಕಾರಣಕ್ಕೆ ವಿಪಕ್ಷಗಳು ಭ್ರಷ್ಟಾಚಾರದಲ್ಲಿ ಆಡ್ವಾಣಿ ಸಹ ಭಾಗಿಯಾಗಿದ್ದು ರಾಜೀನಾಮೆ ನೀಡಬೇಕೆಂಬ ಕೂಗು ಎದ್ದ ಹಿನ್ನೆಲೆ ಆಡ್ವಾಣಿ ನೈತಿಕತೆಯಿಂದ ರಾಜೀನಾಮೆ ನೀಡಿದ್ದರು‌. ಇದು ಬಿಜೆಪಿಯ ನೈತಕತೆ.
ಸಂತೋಷ ಪಾಟೀಲರ ಸಾವಿನ ಹಿಂದೆ ಅನುಮಾನದ ಹುತ್ತ ಬೆಳೆದಿದೆ. ತನಿಖೆ ನಂತರ ಸತ್ಯಾಂಶ ಹೊರ ಬರಲಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದರಲ್ಲದೇ
ಸಂತೋಷ ಸಾವಿನ ಹಿಂದೆ ಅನೇಕ ಸಂಶಯಗಳಿವೆ. ತಾನೊಬ್ಬನೇ ಒಂದೇ ರೂಮ್ ನಲ್ಲಿ ಇದ್ದು ಸ್ನೇಹಿತರೆಲ್ಲರೂ ಬೇರೆ ರೂಮ್ ‌ನಲ್ಲಿ ಇರಲು ಕಾರಣವೇನು? ವಾಟ್ಸ್ ಪ್ ಸಂದೇಶ ಆತನೇ ಕಳುಹಿಸಿದ್ದಾ? ಬೇರೆಯವರು ಕಳುಹಿಸಿದ್ದಾ? ಇದೆಲ್ಲಾ ತನಿಖೆಯಿಂದ ತಿಳಿದು ಬರಬೇಕೆಂದರು.
ಈಶ್ವರಪ್ಪನವರು ಅವರೇ ಹೇಳಿದ ಪ್ರಕಾರ ನಿರ್ದೋಷಿಯಾಗಿ ಹೊರ ಬರುವ ವಿಶ್ವಾಸ ಇದೆ ಎಂದು ಸಿಟಿ ರವಿ ಹೇಳಿದರು.
ವ್ಯವಸ್ಥೆ ಲ್ಲಿ ಭ್ರಷ್ಟಾಚಾರ ಇದೆ. ಇದನ್ನು ಬಿತ್ತಿ, ಬೆಳೆದು, ಹೆಮ್ಮರ ಮಾಡಿದ್ದು ಕಾಂಗ್ರೆಸ್ ಪಾರ್ಟಿ. ಇದನ್ನು ಕಿತ್ತು ಹಾಕುವ ಪ್ರಯತ್ನ ಮೋದಿ ಅವರ ರೀತಿ ಕರ್ನಾಟಕದಲ್ಲಿ ಯೂ ಆಗಬೇಕು. ಕೆಂಪಣ್ಣ ಅವರು ಹೇಳಿದ್ದನ್ನು ನಾನು ಒಪ್ಪಲ್ಲ. ಶೇ.40 ರಷ್ಟು ಕಮೀಷನ್ ಕೊಟ್ಟು ಕೆಲಸ‌ ಮಾಡುವುದು ಅಸಾಧ್ಯದ ಕೆಲಸ. ನನಗನ್ನಿಸುತ್ತೆ ಕೆಂಪಣ್ಣವರ ಆರೋಪ ಯಾರೋ ಪ್ರಚೋದಿಸಿದ್ದ ಆರೋಪ ಎಂದು ಅನ್ನಿಸುತ್ತೆ ಎಂದರು.
ಕೇಸ್ ಹಾಕದೆ, ದಾಖಲೆ ಸಲ್ಲಿಸದೆ ಕೇವಲ ಆರೋಪ ಮಾಡೋದು ಸರಿಯಲ್ಲ ಎಂದರು.

ಅರ್ಕಾವತಿ ಲೇಔಟ್ ಪ್ರಕರಣ:
ಅರ್ಕಾವತಿ ಲೇಔಟ್ ಪ್ರಕರಣದಲ್ಲಿ ಸಾವಿರಾರು ಕೋಟಿ ರೂ. ಅವ್ಯವಹಾರ ಆಗಿದೆ ಎಂದು ಆರೋಪಿಸಲಾಗಿತ್ತು. ಮುಖ್ಯಮಂತ್ರಿಗಳು ಕೆಂಪಣ್ಣ ಆಯೋಗದ ವರದಿ ಪರಿಶೀಲಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸುವುದಾಗಿ ತಿಳಿಸಿದರು.

ಭೃಷ್ಟಾಚಾರ ಹುಟ್ಟಿ ಬೆಳೆದಿದ್ದೇ ಕಾಂಗ್ರೆಸ್ ನಿಂದ:
ಭ್ರಷ್ಟಾಚಾರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಗೆ ಇಲ್ಲ. ಅರ್ಕಾವತಿ ಪ್ರಕರಣ ಒಂದೇ ಸಾಕು ಕಾಂಗ್ರೆಸ್ ಭ್ರಷ್ಟಾಚಾರ ಎಂಥದ್ದು ಎಂದು ತಿಳಿಯುತ್ತದೆ. ನೈತಿಕತೆಯಿದ್ದರೆ ಡಿ.ಕೆ. ಶಿವಕುಮಾರ ಜೈಲಿಗೆ ಹೋಗಿ ಬರುತ್ತಿರಲಿಲ್ಲ ಎಂದರು.
ಬೆಲೆ ಏರಿಕೆ ಪರಿಣಾಮ ಕರ್ನಾಟಕದ ಚುನಾವಣೆ ಮೇಲೆ ಬೀರೋದು ನಿಜ. ಆದರೆ ಬೆಲೆ ಏರಿಕೆ ಕಾರಣ ತಿಳಿದ ಯಾರೂ ಬಿಜೆಪಿಯನ್ನು ತಿರಸ್ಕರಿಸಲ್ಲ. ಉಕ್ರೇನ್ , ರಷ್ಯಾ ಯುದ್ದ, ಕರೊನಾ ಸಾಂಕ್ರಾಮಿಕ ರೋಗದಿಂದಾಗಿ ಬೆಲೆ ಏರಿಕೆಯಾಗಿದೆ. ಅದಕ್ಕಾಗಿಯೇ ಬೆಲೆ ಏರಿಕೆ ನಿಯಂತ್ರಿಸಲು ಬಿಜೆಪಿ ಶ್ರಮಿಸುತ್ತಿದೆ. ಆತ್ಮ ನಿರ್ಭರದಂಥ
ದೂರ ದೃಷ್ಟಿಯ ಯೋಜನೆ ಕೂಡ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಸಂಕಷ್ಟದಲ್ಲೂ ಉಚಿತ ರೇಷನ್, ಉಚಿತ ವ್ಯಾಕ್ಸಿನೇಶನ್ ನೀಡೋದು ಸುಲಭ ಅಲ್ಲ. ಪಂಚರಾಜ್ಯ ಚುನಾವಣೆ ಸಂದರ್ಭದಲ್ಲೂ ಇದೇ ಪ್ರಶ್ನೆಗಳು ಎದುರಾಗಿದ್ದವು. ಆದರೆ ಜನ ವಾಸ್ತವ ಅರಿತು ಬಿಜೆಪಿಗೆ ಮತ ನೀಡಿದರು. ಕರ್ನಾಟಕದಲ್ಲೂ ಜನ ವಾಸ್ತವ ಅರಿತು ಬಿಜೆಪಿ ಒಪ್ಪಿಕೊಳ್ಳುವ ವಿಶ್ವಾಸ ಇದೆ ಎಂದರು.

ಎಂಎಲ್ ಸಿ ಅರುಣ ಶಹಾಪುರ, ವಿಜುಗೌಡ ಪಾಟೀಲ, ಎಸ್.ಕೆ. ಬೆಳ್ಳುಬ್ಬಿ ಮತ್ತಿತರರಿದ್ದರು.

error: Content is protected !!