ಈಶ್ವರಪ್ಪ ಬದಲು ಡಿಕೆಶಿಗೆ ಜೈಲಿಗೆ ಕಳುಹಿಸಿ ಎಂದ ಶಾಸಕ ಯತ್ನಾಳ, ಕಾರಣ ಕೇಳಿದರೆ ನಿಜ ಎನ್ನಿಸದೇ ಇರಲಾರದು…!
ವಿಜಯಪುರ: ಸಚಿವ ಕೆ.ಎಸ್. ಈಶ್ವರಪ್ಪಗೆ ಜೈಲಿಗೆ ಹಾಕುವ ಮೊದಲು ಡಿಕೆಶಿಗೆ ಜೈಲಿಗೆ ಹಾಕಬೇಕೆಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರ ಹೊರವಲಯದ ತೊರವಿ ಲಕ್ಷ್ಮಿ ನರಸಿಂಹ ದೇವಸ್ಥಾನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ಹಾಕಿದ ಬ್ಯಾರಿಕೇಡ್ ಹಾರುವಷ್ಟು ಶಕ್ತಿ ಡಿಕೆಶಿಗೆ ಇದೆ. ಅನಾರೋಗ್ಯದ ನೆಪ ನೀಡಿ ಜೈಲಿನಿಂದ ಹೊರಗೆ ಬಂದ ಡಿಕೆಶಿಗೆ ಇದ್ದಕ್ಕಿದ್ದಂತೆ ಶಕ್ತಿ ಬಂದಿದೆ ಎಂದು ಲೇವಡಿ ಮಾಡಿದರು.
ಅದೇ ದೆಹಲಿಯಲ್ಲಿ ಜೈಲ್‌ಗೆ ಹಾಕಿದಾಗ ಬಿಪಿ, ಶುಗರ್ ಹೆಚ್ಚಾಗಿದೆ ಎಂದು ಹೇಳುತ್ತಿದ್ದ ಡಿಕೆಶಿ ಬ್ಯಾರಿಕೇಡ್ ಜಿಗಿತಾರೆ ಅಂದ್ರೆ ನೀವು ಇನ್ನೂ ಫಿಟ್ ಆಗಿದ್ದೀರಿ ಅಂದರ್ಥ. ಇದನ್ನು ಕೋರ್ಟ್ ಕೂಡ ಗಮನಿಸಿ, ಪರಿಗಣಿಸಿ ಮತ್ತೆ ಜೈಲ್‌ಗೆ ಕಳಿಸಬೇಕು ಎಂದರು.