ಆಕೆ ಮೂತ್ರ ವಿಸರ್ಜನೆ ಮಾಡುವುದನ್ನು ಕಂಡ, ಪ್ರಶ್ನಿಸಿದ್ದಕ್ಕೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಕೊಂದ, ಕೊನೆಗೆ ನ್ಯಾಯಾಲಯ ವಿಧಿಸಿದ ಶಿಕ್ಷೆ ಏನು ಗೊತ್ತಾ?
ಸರಕಾರ ನ್ಯೂಸ್ ವಿಜಯಪುರ
ರಾತ್ರಿ ಮನೆ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ನೋಡುತ್ತಾ ನಿಂತಿದ್ದನ್ನು ಪ್ರಶ್ನಿಸಿದ್ದಕ್ಕೆ ಮಕ್ಕಳ ಮುಂದೆಯೇ ತಾಯಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಅಪರಾಧಿಗೆ ನ್ಯಾಯಾಲಯ ವಿಧಿಸಿದ ತೀರ್ಪು ಏನು ಗೊತ್ತಾ?
ಸಿಂದಗಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ 2018ರಲ್ಲಿ ನಡೆದ ಪ್ರಕರಣವೊಂದರ ತನಿಖೆ ನಡೆಸಿದ ಇಲ್ಲಿನ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅಪರಾಧಿಗೆ ಮರಣ ದಂಡನೆ ವಿಧಿಸಿದೆ. ಕೊಕಟನೂರ ಗ್ರಾಮದ ಅಕ್ಬರ್ ಊರ್ಫ್ ಅಕ್ಬರಬಾಷಾ ಗಾಲೀಬಸಾಬ ಬಾಗವಾನ ಗಲ್ಲು ಶಿಕ್ಷೆಗೆ ಗುರಿಯಾದ ವ್ಯಕ್ತಿ. ಅದೇ ಗ್ರಾಮದ ಶಮಶಾದ ಅಕ್ಬರ್ ಮಕಾನದಾರ ರಾತ್ರಿ ತಮ್ಮ ಮನೆಯ ಬಾಜು ಮೂತ್ರ ವಿಸರ್ಜನೆ ಮಾಡುವುದನ್ನು ಅಕ್ಬರ್ ನೋಡುತ್ತಾ ನಿಂತಿದ್ದನು. ಇದನ್ನು ಗಮನಿಸಿದ ಶಮಶಾದ ಅಕ್ಬರ್‌ನನ್ನು ಕೇಳಿದ್ದರಿಂದ ಸಿಟ್ಟಾದ ಅಕ್ಬರ್ ಅವಾಚ್ಯ ಶಬ್ದಗಳಿಂದ ಬೈದಾಡಿ ಹೊಲಾ ಹೋಗಲಿ ನಿನ್ನ ಜೊತೆ ಮಲಗುತ್ತೇನೆ, ಇಲ್ಲಾಂದ್ರೆ ನಿನಗೆ ಸುಟ್ಟು ಹಾಕುತ್ತೇನೆಂದು ಜೀವ ಬೆದರಿಕೆ ಹಾಕಿದ್ದನು.
2018 ಜ. 27ರಂದು ಮನೆಯ ಮುಂದೆ ಮಕ್ಕಳೊಂದಿಗೆ ಕುಳಿತಿದ್ದ ಶಮಶಾದ ಅಕ್ಬರ್ ಮಕಾನದಾರ ಇವಳ ಮೈಮೇಲೆ ಅಕ್ಬರ್ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಓಡಿ ಹೋಗಿದ್ದನು. ಶಮಶಾದಳ ಶರೀರ ಪೂರ್ತಿ ಸುಟ್ಟ ಗಾಯಗಳಾಗಿದ್ದು, ಉಪಚಾರಕ್ಕಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾಗ ಉಪಚಾರ ಫಲಿಸದೆ ಸಾವಿಗೀಡಾಗಿದ್ದಳು. ಸಿಂದಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಚಾರಣ ಕೈಗೆತ್ತಿಕೊಂಡ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸತೀಶ ಎಲ್.ಪಿ. ಅಕ್ಬರ್ ಊರ್ಫ್ ಅಕ್ಬರ್‌ಭಾಷಾ ಗಾಲೀಬಸಾಬ ಬಾಗವಾನನಿಗೆ ಮರಣ ದಂಡನೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸಿಂದಗಿ ಸಿಪಿಐ ಎಂ.ಕೆ. ಧಾಮಣ್ಣವರ ಪ್ರಕರಣದ ತನಿಖೆ ನಡೆಸಿದ್ದರು. ಸರ್ಕಾರದ ಪರವಾಗಿ ಅಭಿಯೋಜಕಿ ವಿ.ಎಸ್. ಇಟಗಿ ವಾದ ಮಂಡಿಸಿದ್ದರು.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)