ಜ್ಯೋತಿಷಿ ನಂಬಿ ಒಂದೂವರೆ ಲಕ್ಷ ಕಳೆದುಕೊಂಡ ಯುವತಿ, ಲ್ಯಾಬ್‌ಟೆಕ್ನಿಷಿಯನ್‌ಗೆ ಪಂಗನಾಮ, ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ.
ಸರಕಾರ ನ್ಯೂಸ್ ವಿಜಯಪುರ
ಕೊಳ್ಳೆಗಾಲದ ಮಂತ್ರ ಶಕ್ತಿಯನ್ನು ನಂಬಿ ಉದ್ಯೋಗಸ್ಥ ಮಹಿಳೆಯೋರ್ವಳು ಒಂದೂವರೆ ಲಕ್ಷಕ್ಕೂ ಅಧಿಕ ಹಣ ಮೋಸ ಹೋದ ಪ್ರಕರಣ ಬೆಳಕಿಗೆ ಬಂದಿದೆ.
ತಿಕೋಟಾದ ಬಿಎಲ್‌ಡಿಇ ಕಾಲೇಜ್ ಹತ್ತಿರದ ನಿವಾಸಿ ಸುಮಾ(ಹೆಸರು ಬದಲಿಸಲಾಗಿದೆ) ವಂಚನೆಗೊಳಗಾದ ಮಹಿಳೆ.
ವೃತ್ತಿಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿರುವ ಸುಮಾ ಖಾಸಗಿ ಕಾರ್ಡಿಯಾಕ್ ಕೇರ್‌ನಲ್ಲಿ ಕೆಲಸ ಮಾಡುತ್ತಾರೆ. ಹಾಗೆ ಕೆಲಸ ಮಾಡುವ ಸಂದರ್ಭ ಇನ್‌ಸ್ಟಾಗ್ರಾಂನಲ್ಲಿ ಬಂದ ಜ್ಯೋತಿಷಿಯ ಜಾಹಿರಾತು ಗಮನಿಸಿದ್ದು, ಅದರಲ್ಲಿ ‘ಇಷ್ಟಪಟ್ಟ ಸ್ತ್ರೀ ಪುರುಷ ವಶೀಕರಣ ಓಪನ್ ಚಾಲೆಂಜ್ ಶೇ.100 ಪರಿಹಾರ ಶತಃ ಸಿದ್ಧ ಮೋಡಿ ಮಾಮತ್ರಿಕರು ರಾಘವೇಂದ್ರ ಶರ್ಮಾ (ಗೋಲ್ಡ್ ಮೆಡಲಿಸ್ಟ್) 6363083254’, ಗಂಡ ಹೆಂಡತಿ ಕಲಹ ಡೈವೋರ್ಸ್ ಪ್ರಾಬ್ಲಮ್, ಆಸ್ತಿಯಲ್ಲಿ ಕದನ, ಕೋರ್ಟ್ ಕೇಸ್, ಆರೋಗ್ಯದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಂತಾನ ಫಲ, ಸಾಲಬಾಧೆ, ಮದುವೆ ಕಾರ್ಯಗಳಲ್ಲಿ ವಿಘ್ನ, ಅತ್ತೆ ಸೊಸೆ ಕಲಹ, ಮನದಾಳದ ಯಾವುದೇ ಗುಪ್ತ ಸಮಸ್ಯೆ ಇದ್ದರೆ, ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆ, ಒಂದು ಫೋನ್ ಕರೆ ನಿಮ್ಮ ಜೀವನವನ್ನು ಬದಲಾಯಿಸಬಲ್ಲದು, ವಿ.ಸೂ.ಕೊಳ್ಳೆಗಾಲದ ಮಂತ್ರಶಕ್ತಿಯಿಂದ ಸ್ತ್ರೀ ವಶೀಕರಣ, ಪುರುಷ ವಶೀಕರಣ 3 ದಿನದಲ್ಲಿ ಪರಿಹಾರ ಶತಃಸಿದ್ಧ’ ಎಂದಿತ್ತು. ಇದನ್ನು ನಂಬಿ ಸಮಸ್ಯೆ ಹೇಳಿಕೊಳ್ಳಲೆಂದು ಸುಮಾ ಕರೆ ಮಾಡಿದ್ದಾರೆ.
ಸಮಸ್ಯೆ ಬಗೆ ಹರಿಸುವುದಾಗಿ ನಂಬಿಸಿದ ರಾಘವೇಂದ್ರ ಭಟ್ಟ ಎಂಬ ವ್ಯಕ್ತಿ ಪೂಜೆ ಹೆಸರಿನಲ್ಲಿ ಹಂತ ಹಂತವಾಗಿ ಫೋನ್‌ಪೇ ಮೂಲಕ ದುಡ್ಡು ಹಾಕಿಸಿಕೊಂಡಿದ್ದಾನೆ. ಪೂಜೆ ಅರ್ಧಕ್ಕೆ ನಿಂತರೆ ತೊಂದರೆಯಾಗಲಿದೆ ಎಂದು ಹೆದರಿಸಿ ಮತ್ತೆ ಮತ್ತೆ ಹಣ ಹಾಕಿಸಿಕೊಂಡಿದ್ದು ಒಟ್ಟು 1,67,556ರೂಪಾಯಿ ಹಣ ಪಡೆದಿದ್ದಾನೆ. ಕೊನೆಗೆ ಮೋಸದ ಅರಿವಾಗಿ ಸುಮಾ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.