ಗುತ್ತಿಬಸವಣ್ಣ ಏತನೀರಾವರಿ ಯೋಜನೆ ಹೋರಾಟಕ್ಕೆ ಮಕ್ಕಳ ಸಾಥ್, ಅನ್ನದಾತನ ಅಳಲಿಗೆ ಮುಗ್ಧ ಮನಸ್ಸುಗಳ ಬೆಂಬಲ…
ವಿಜಯಪುರ: ಮಹಾತ್ವಾಕಾಂಕ್ಷಿ ಗುತ್ತಿ ಬಸವಣ್ಣ ಏತನೀರಾವರಿ ಹೋರಾಟಕ್ಕೆ ಮಕ್ಕಳು ಸಾಥ್ ನೀಡುವ ಮೂಲಕ ಸರ್ಕಾರಕ್ಕೆ ಶಾಕ್ ನೀಡಿದ್ದಾರೆ.
ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯಡಿ ಕಾಲುವೆಯ ಕಟ್ಟ ಕಡೆಯ ರೈತರಿಗೂ ನೀರು ತಲುಪುವಂತೆ ಮಾಡಲು ನೂರಾರು ರೈತರು ತಾಂಬಾದಲ್ಲಿ ಕಳೆದ 60 ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಈವರೆಗೂ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಇದರಿಂದ ಅನ್ನದಾತನ ಮಕ್ಕಳು ಸಹ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದು ಸರ್ಕಾರದ ನಡೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಕಾಲುವೆಗೆ ನೀರು ಹರಿಸುವಂತೆ ಪ್ರತೀ ವರ್ಷ ರೈತರು ಹೋರಾಟ ಹಮ್ಮಿಕೊಳ್ಳುತ್ತಲೇ ಬಂದಿದ್ದಾರೆ. ಆದರೆ, ಈವರೆಗೂ ಬೇಡಿಕೆ ಈಡೇರಿಲ್ಲ. ಹೀಗಾಗಿ ಗುತ್ತಿ ಬಸವಣ್ಣ ಹೋರಾಟ ಸಮಿತಿ ಜನ್ಮ ತಾಳಿದ್ದು ದಿನಕ್ಕೊಂದು ವಿನೂತನ ಮಾದರಿ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ. ಇದೀಗ ಮಕ್ಕಳು ಭಾಗಿಯಾಗಿರುವುದು ಸರ್ಕಾರಕ್ಕೆ ಚಾಟಿ ಬೀಸಿದಂತಾಗಿದೆ.