ಅಯ್ಯಯ್ಯೋ….ಅನಾಮತ್ತಾಗಿ ಹೋಯಿತು ಐದು ಲಕ್ಷ ರೂಪಾಯಿ, ರಾಜುವಿನ ಕಣ್ಣೀರ ಕಥೆ ಕೇಳದೇ…!
ಸರಕಾರ್ ನ್ಯೂಸ್ ವಿಜಯಪುರ
ಒಂದಲ್ಲ ಎರಡಲ್ಲ ಬರೋಬ್ಬರಿ ಐದು ಲಕ್ಷ ರೂ. ದೋಚಿಕೊಂಡು ಹೋದ ಪ್ರಕರಣ ವಿಜಯಪುರದ ತಾಜ್ ಬಾವಡಿ ಪ್ರದೇಶದಲ್ಲಿ ನಡೆದಿದೆ.
ಬ್ಯಾಂಕ್‌ನಲ್ಲಿ ಹಣ ಡ್ರಾ ಮಾಡಿಕೊಂಡು ಹೋಗುತ್ತಿದ್ದ ವ್ಯಕ್ತಿ ಬಳಿಯ ಐದು ಲಕ್ಷ ರೂಪಾಯಿ ದೋಚಿಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಜಾಲಗೇರಿ ತಾಂಡಾ ನಿವಾಸಿ ರಾಜು ರಾಠೋಡ ಹಣ ಕಳೆದುಕೊಂಡು ಕಂಗಾಲಾದ ಗ್ರಾಹಕ.
ಗುರುವಾರ ಕಬ್ಬು ಕಟಾವಿಗೆ ಬಂದವರಿಗೆ ಹಣ ನೀಡಲೆಂದು ಬಿಎಲ್ ಡಿಇ ಹತ್ತಿರದ ಎಸ್‌ಬಿಐ ಬ್ಯಾಂಕ್‌ನಲ್ಲಿ ಹಣ ಡ್ರಾ ಮಾಡಿಕೊಂಡ ರಾಜು ಬಳಿಯ ಹಣವನ್ನು ಎಗರಿಸಲಾಗಿದೆ.
ಹಣ ಕಳೆದುಕೊಂಡಿರುವ ರಾಜು ಕಣ್ಣೀರು ಹಾಕುತ್ತಿದ್ದಾನೆ.
ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.