ರೈತನನ್ನು ಬಲಿ ಪಡೆದ ಯಂತ್ರ, ಕುಂಟಿ ಹೊಡೆಯುವಾಗ ಅವಘಡ, ಕಬ್ಬಿಣ ಕುಂಟೆ ಬಡಿದು ದುರಂತ ಸಾವು
ಸರಕಾರ್ ನ್ಯೂಸ್ ವಿಜಯಪುರ
ಮುಂಗಾರು ಹಂಗಾಮು ಜೋರಾಗಿದ್ದು ಎಲ್ಲೆಡೆ ಬಿತ್ತನೆ ಕಾರ್ಯ ಚುರುಕು ಪಡೆದಿದೆ. ಅಂತೆಯೇ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ರೈತನೋರ್ವನನ್ನು ಟ್ರ್ಯಾಕ್ಟರ್ ಬಲಿ ಪಡೆದಿದೆ.
ಟ್ರ್ಯಾಕ್ಟರ್ ಇಂಜಿನ್ ಹಿಂಬದಿ ಅಳವಡಿಸಿದ್ದ ಕಬ್ಬಿಣದ ಕುಂಟೆ ಬಡಿದು ರೈತನೋರ್ವ ಸಾವಿಗೀಡಾಗಿದ್ದಾನೆ.
ಮುದ್ದೇಬಿಹಾಳ ತಾಲ್ಲೂಕಿನ ಇಂಗಳಗೇರಿ ಗ್ರಾಮದಲ್ಲಿ ಗುರುವಾರ ಈ ಘಟನೆ ನಡೆದಿದೆ.
48 ವರ್ಷದ ರೈತ ಮಲ್ಲಣ್ಣ ಎರೆಡ್ಡಿ ಸ್ಥಳದಲ್ಲೆ ಸಾವಿಗೀಡಾಗಿದ್ದಾರೆ.
ಚಾಲಕ ಟ್ರ್ಯಾಕ್ಟರನ್ನು ತಿರುಗಿಸಿದಾಗ ಹಿಂದೆ ಇದ್ದ ಕಬ್ಬಿಣದ ಕುಂಟೆ ನೇಗಿಲು ಬಡಿದು ದುರಂತ ಸಾವಾಗಿದೆ. ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.