ರಾತ್ರಿಯಾದರೂ ಗಂಡ ಮನೆಗೆ ಬಂದಿಲ್ಲ, ಆಕೆಯೊಂದಿಗೆ ಹೋಗಿರಬಹುದಾ? ಶಂಕಿತ ಪತ್ನಿಯಿಂದ ದೂರು ದಾಖಲು !
ಸರಕಾರ್ ನ್ಯೂಸ್ ಬ.ಬಾಗೇವಾಡಿ
ಟಕ್ಕಳಕಿಯಿಂದ ಬಸವನಬಾಗೇವಾಡಿಗೆ ಹೋಗಿ ಬರುತ್ತೇನೆಂದು ಹೋದ ಪತಿ ಮರಳಿ ಮನೆಗೆ ಬಂದಿಲ್ಲ, ಆಕೆಯೊಂದಿಗೇನಾದರೂ ಓಡಿ ಹೋಗಿರಬಹುದಾ?
ಹೀಗೆ ಸಂಶಯ ವ್ಯಕ್ತಪಡಿಸಿದ ಪತ್ನಿ ಪತಿಯನ್ನು ಹುಡುಕಿಕೊಡುವಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಸವನಬಾಗೇವಾಡಿ ತಾಲೂಕಿನ ಟಕ್ಕಳಕಿ ಗ್ರಾಮದ ಸುಜಾತಾ ಮುತ್ತಪ್ಪ ನಡುವಿನಮನಿ ಎಂಬುವರು ದೂರು ದಾಖಲಿಸಿದ್ದು, ಪತಿಯ ಹುಡುಕಾಟದಲ್ಲಿದ್ದಾರೆ.
ಏನಿದು ಪ್ರಕರಣ?
ಡಿ. 17ರಂದು ಮಧ್ಯಾಹ್ನ ಮನೆಯಿಂದ ಬಸವನಬಾಗೇವಾಡಿಗೆ ಹೋಗಿ ಬರುತ್ತೇನೆಂದು ಹೋದ ಪತಿ ಮುತ್ತಪ್ಪ ರಾತ್ರಿಯಾದರೂ ಮನೆಗೆ ಬಂದಿಲ್ಲ. ಫೋನ್ ಮಾಡಿದರೂ ಸ್ವಿಚ್ ಆಫ್ ಆಗಿತ್ತು. ಬಳಿಕ ಗಾಬರಿಗೊಂದು ಸಂಬಂಧಿಕರನ್ನೆಲ್ಲ ವಿಚಾರಿಸಿದರೂ ಸಿಕ್ಕಿಲ್ಲ. ಸಿಂದಗಿ, ಯಂಕಂಚಿ, ಹುಬ್ಬಳ್ಳಿ, ಪೂನಾ, ಮುಧೋಳ ಕಡೆಗೆ ಹುಡುಕಾಡಿದರೂ ಸಿಕ್ಕಿಲ್ಲ.
ಆಕೆಯೊಂದಿಗೇನಾದರೂ….!
ಈ ಹಿಂದೆ ಮುತ್ತಪ್ಪ ಮುಧೋಳಕ್ಕೆ ಕೆಲಸಕ್ಕೆ ಹೋದಾರ ಪವಿತ್ರಾ ಗಸ್ತಿ ಎಂಬುವಳು ಪರಿಚಯವಾಗಿದ್ದಳು. ಮುತ್ತಪ್ಪ ಆಕೆಯೊಂದಿಗೆ ಸಲುಗೆಯಿಂದ ಇರುತ್ತಿದ್ದನು. ಸದ್ಯ ಅವಳು ಸಹ ಊರಲ್ಲಿ ಇರುವುದಿಲ್ಲ. ಅವಳೊಂದಿಗೆ ಹೋಗಿರಬಹುದೆಂಬ ಶಂಕೆ ಇದೆ. ಹೀಗಾಗಿ ತನ್ನ ಗಂಡನಿಗೆ ಹುಡುಕಿಕೊಡಿ ಎಂದು ಸುಜಾತಾ ದೂರಿನಲ್ಲಿ ತಿಳಿಸಿದ್ದಾರೆ.
ದೂರು ದಾಖಲಿಸಿಕೊಂಡಿರುವ ಬಸವನಬಾಗೇವಾಡಿ ಪೊಲೀಸರು ಮುತ್ತಪ್ಪನ ಹುಡುಕಾಟಕ್ಕೆ ಜಾಲ ಬೀಸಿದ್ದಾರೆ.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)