ನಮ್ಮ ವಿಜಯಪುರ

ಭೀಕರ ಅಪಘಾತ ! ಬೈಕ್ ಸವಾರ ಸಾವು

ವಿಜಯಪುರ: ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಮೃತಪಟ್ಟಿರುವ ಘಟನೆ
ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಯುಕೆಪಿ ಕ್ರಾಸ್ ಬಳಿ ನಡೆದಿದೆ. ಬಬಲೇಶ್ವರ ತಾಲೂಕಿನ ತಾಜಪೂರ ಗ್ರಾಮದ ಸಾಬು ಔರಸಂಗ (25) ಮೃತನಾಗಿದ್ದಾನೆ. ಸಿಂದಗಿ ಕಡೆಯಿಂದ ಬಾಗಲಕೋಟೆ ಕಡೆಗೆ ಹೊರಟಿದ್ದ ಸಿಮೆಂಟ್ ತುಂಬಿದ ಲಾರಿಗೆ ವಿಜಯಪುರ ಕಡೆಯಿಂದ ಬಂದ ಬೈಕ್ ಸವಾರ ವೇಗವಾಗಿ ಬಂದು ಲಾರಿ ಹಿಂಬದಿಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ. ಕೊಲ್ಹಾರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

error: Content is protected !!