Uncategorized

ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹಿರೇಮಸಳಿಯಲ್ಲಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಶಾಲಾ ಸಂಸತ್ ರಚನೆ

ವಿಜಯಪುರ: ಇಂಡಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಹಿರೇಮಸಳಿ ಯಲ್ಲಿ ಶಾಲಾ ಸಂಸತ್ತು ರಚನೆಯನ್ನು ಪ್ರಜಾಪ್ರಭುತ್ವದ ಮಾದರಿಯಲ್ಲಿ ಚುನಾವಣೆಯ ಮೂಲಕ ರಚನೆ ಮಾಡಲಾಯಿತು. ನಾಲ್ಕರಿಂದ ಎಂಟನೇ ವರ್ಗದ ವಿದ್ಯಾರ್ಥಿಗಳು ಮತದಾರರಾಗಿ ಎಲೆಕ್ಟ್ರಾನಿಕ್ ಮಷೀನ್ ಮೂಲಕ ಮತದಾನ ಮಾಡಿದರು. ಶಾಲಾ ಸಂಸತ್ ರಚನೆಯ ಚುನಾವಣೆಯ ನಿಮಿತ್ಯವಾಗಿ ಚುನಾವಣಾ ಅಧಿಕಾರಿಯಾಗಿ ಮುಖ್ಯ ಗುರುಗಳಾದ ಆನಂದ್ ಕೆಂಭಾವಿಯವರು ನಿರ್ವಹಿಸಿ ಪ್ರಿಸೈಡಿಂಗ್ ಆಫೀಸರ್ ಆಗಿ ಹಿರಿಯ ಗುರುಮಾತೆಯರಾದ ಬಿ ಕೆ ಪಟ್ಟಣಶೆಟ್ಟಿ ಅವರು ನಿರ್ವಹಿಸಿದರು. ಪೋಲಿಂಗ್ ಅಧಿಕಾರಿಗಳಾಗಿ ದ್ರಾಕ್ಷಾಯಿಣಿ ಮಾದನಶೆಟ್ಟಿ ಹಾಗೂ ಚಂದ್ರಕಲಾ ಬೇಡಗೆ ಗುರುಮಾತೆಯರು ನಿರ್ವಹಿಸಿದರು.ಪೊಲೀಸ್ ಸಿಬ್ಬಂದಿಗಳಾಗಿ ವಿದ್ಯಾರ್ಥಿಗಳೇ ನಿರ್ವಹಿಸಿ ಮಾದರಿಯಾದರು.ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ಪಿ ಆರ್ ಪಾಂಡ್ರೆ,ಬಿ ಸಿ ಸಂಗಮೇಶ,ಬಿ ಜಿ ಅಡಳ್ಳಿ, ಡಿ ಎನ್ ಹರಿಜನ್,ಆರ್ ಟಿ ತಳವಾರ, ಆರ್ ಆರ್ ಬಡಿಗೇರ್,ಪ್ರತಿಭಾ ಗಾಬಸಾವಳಗಿ, ಪ್ರೇಮಾ ಯಾರನಾಳ ಅತಿಥಿ ಶಿಕ್ಷಕರಾದ ಎಚ್ ಆರ್ ನಾಟಿಕಾರ್, ರಫೀಕ್ ಗೌರ್, ಶಂಕೆಮ್ಮ ತಳವಾರ, ಕೀರ್ತಿ ಗುನ್ನಾಪುರ, ಶಾರದಾ ಮುಗಳಿ,ಪ್ರೀತಿ ಮಠಪತಿ ಇವರೆಲ್ಲರೂ ಉಪಸ್ಥಿತಿದ್ದರು.

error: Content is protected !!