ಪರಿಶಿಷ್ಟ ಪಂಗಡದ ವ್ಯಕ್ತಿ ಹತ್ಯೆ; ಕೊಲೆಗಡುಕನ ಬಂಧಿಸುವಲ್ಲಿ ಪಿಎಸ್‌ಐ-ಸಿಪಿಐ ವಿಫಲ, ಕ್ರಮ ಕೈಗೊಳ್ಳಲು ಡಿವೈಎಸ್‌ಪಿಗೆ ಮನವಿ
ಸರಕಾರ ನ್ಯೂಸ್ ಇಂಡಿ
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ವಿಫಲರಾಗಿರುವ ಆಲಮೇಲ ಪಿಎಸ್‌ಐ ಹಾಗೂ ಸಿಪಿಐ ಮೇಲೆ ಶಿಸ್ತುಕ್ರಮ ಕೈಗೊಳ್ಳಲು ಆಗ್ರಹಿಸಿ ತಳವಾರ-ಪರಿವಾರ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಸೋಮವಾರ ಡಿವೈಎಸ್‌ಪಿ ಜಗದೀಶ್. ಎಚ್, ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಳವಾರ ಸಮಾಜದ ಇಂಡಿ ತಾಲೂಕಾ ಅಧ್ಯಕ್ಷ ಧರ್ಮರಾಜ ವಾಲೀಕಾರ ಮಾತನಾಡಿ, 2024ರ ಜ.5 ರಂದು ಆಲಮೇಲ ತಾಲ್ಲೂಕಿನ ವಿಭೂತಿಹಳ್ಳಿ ಗ್ರಾಮದ ಕಾಂತಪ್ಪ ಗೊಲ್ಲಾಳಪ್ಪ ವಿಭೂತಿಹಳ್ಳಿ ಅವರ ಕೊಲೆಯಾಗಿತ್ತು. ಕೊಲೆಯಾದ ವ್ಯಕ್ತಿ ಪರಿಶಿಷ್ಟ ಪಂಗಡದ ತಳವಾರ ಸಮುದಾಯಕ್ಕೆ ಸೇರಿದವನೆಂದು ಗೊತ್ತಿದ್ದರೂ ಪಿಎಸ್‌ಐ ಅವರು ಅಟ್ರಾಸಿಟಿ ಕೇಸ್ ದಾಖಲಿಸಿಲ್ಲ. ಅಲ್ಲದೇ, ದೂರು ದಾಖಲಾದರೂ ಈವರೆಗೆ ಆರೋಪಿಯನ್ನು ಬಂಧಿಸಿಲ್ಲ. ಯಾರದ್ದೋ ಕೈಗೊಂಬೆಯಾಗಿ ವರ್ತಿಸುತ್ತಿರುವ ಪಿಎಸ್‌ಐ ಹಾಗೂ ಸಿಪಿಐ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಎಸ್.ಜೆ. ವಾಲಿಕಾರ, ಹುಚ್ಚಪ್ಪ ತಳವಾರ, ಲಕ್ಷ್ಮಣ ಮೂಲಿ, ಶಿವಪ್ಪ ಮಾಶ್ಯಾಳ, ಶಂಕರ ದೇವೆಂದ್ರಪ್ಪ ಕೊಳ್ಳೊರ, ಹಣಮಂತ ವಿಭೂತಿಹಳ್ಳಿ, ಲಕ್ಷ್ಮಿಬಾಯಿ ವಿಭೂತಿಹಳ್ಳಿ, ಅನಸೂಬಾಯಿ ಕೊಳ್ಳೂರ, ಗಾಲೀಬ್ ವಿಭೂತಿಹಳ್ಳಿ, ಗೌರಾಬಾಯಿ ತಳವಾರ, ನಿಂಗಪ್ಪ ವಿಭೂತಿಹಳ್ಳಿ, ಈರಪ್ಪ ಗುರಿಕಾರ, ಮಲ್ಲು ಅಚಲೇರಿ, ಬಸವರಾಜ ವಿಭೂತಿಹಳ್ಳಿ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)