ನಮ್ಮ ವಿಜಯಪುರ

ಪಾಯಖಾನೆ ಕಟ್ಟುವ ವಿಷಯಕ್ಕೆ ಕೊಲೆ, ಕೊಡಲಿಯಿಂದ ಕೊಚ್ಚಿ ಹತ್ಯೆ !

ಸರಕಾರ್ ನ್ಯೂಸ್ ಬಬಲೇಶ್ವರ

ಪಾಯಖಾನೆ ಕಟ್ಟುವ ವಿಚಾರಕ್ಕೆ ಉಂಟಾದ ಜಗಳವೊಂದು ಕೊಲೆಯಲ್ಲಿ ಅಂತ್ಯ ಕಂಡಿದೆ.

ಬಬಲೇಶ್ವರ ತಾಲೂಕಿನ ಕಾಖಂಡಕಿ ಬಳಿಯ ಕಿಲಾರಿಹಟ್ಟಿಯಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ.
ಸ್ಥಳೀಯ ನಿವಾಸಿ ಮರಗು ಪಾಂಡ್ರೆ(55) ಹತ್ಯೆಯಾದ ವ್ಯಕ್ತಿ. ಬೀಗರಾದ ಬೀರಪ್ಪ ಮತ್ತಿತರರು ಸೇರಿ ಹತ್ಯೆ ನಡೆಸಿದ್ದಾರೆನ್ನಲಾಗಿದೆ.

ಪಾಯಖಾನೆ ಕಟ್ಟುವ ಜಾಗದ ವಿಚಾರಕ್ಕೆ ಬೀಗರಲ್ಲಿಯೇ ಪರಸ್ಪರ ಜಗಳ ಉಂಟಾಗಿದೆ. ಘಟನೆಯಲ್ಲಿ ಮರಗು
ಕೈಗೆ, ತಲೆಗೆ ಕೊಡಲಿಯಿಂದ ಹೊಡೆಯಲಾಗಿದ್ದು, ಗಂಭೀರ ಗಾಯಗೊಂಡ ಮರಗುನನ್ನು ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಬೆಳಗ್ಗೆ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾ‌ನೆ. ಸ್ಥಳಕ್ಕೆ ಬಬಲೇಶ್ವರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

error: Content is protected !!