ತಾತ್ಕಾಲಿಕ ಫೋಡಿ ಮಾಡಲು ಲಂಚಕ್ಕೆ ಬೇಡಿಕೆ, ಲೋಕಾಯುಕ್ತ ಬಲೆಗೆ ಬಿದ್ದ ಸರ್ವೆಯರ್-ಖಾಸಗಿ ವ್ಯಕ್ತಿ !
ಸರಕಾರ ನ್ಯೂಸ್ ವಿಜಯಪುರ
ತಾತ್ಕಾಲಿಕವಾಗಿ ಫೋಡಿ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇರಿಸಿದ್ದ ಸರ್ವೆಯರ್ ಹಾಗೂ ಓರ್ವ ಖಾಸಗಿ ವ್ಯಕ್ತಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಸರ್ವೆಯರ್ ಮಲ್ಲಪ್ಪ ಜಂಬಗಿ ಹಾಗೂ ಖಾಸಗಿ ಸಹಾಯಕ ಗುರುದತ್ತ ಬಿರಾದಾರ ಎಂಬುವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಪ್ರಕಾಶ ಸಿಂಗೆ ಎಂಬುವವರ ನಾಲ್ಕು ಎಕರೆ ಜಮೀನಿನ ತಾತ್ಕಾಲಿಕ ಫೋಡಿ ಮಾಡಿಕೊಡಲು 47, 500 ಲಂಚ ಕೇಳಿದ್ದರು. ಇದರಿಂದ ಬೇಸತ್ತ ಸಿಂಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸಿರುವ ಲೋಕಾಯುಕ್ತ ಪೊಲೀಸರು ಲಂಚದ ಹಣ ಸ್ವೀಕರಿಸುತ್ತಿದ್ದಾಗ ಸರ್ವೆಯರ್ ಮಲ್ಲಪ್ಪ ಜಂಬಗಿ ಹಾಗೂ ಖಾಸಗಿ ಸಹಾಯಕ ಗುರುದತ್ತ ಬಿರಾದಾರ ಎಂಬುವರನ್ನು ಬಂಧಿಸಿದ್ದಾರೆ.
ಪ್ರೀತಿಸಿ ಮದುವೆಯಾದ ನವ ವಿವಾಹಿತರು ನೇಣಿಗೆ ಶರಣು, ಅಯ್ಯಯ್ಯೋ ಏನಾಗಿತ್ತು ಇವರಿಗೆ?
ಲೋಕಾಯುಕ್ತ ಎಸ್ಪಿ ಮಲ್ಲೇಶ ಮಾರ್ಗದಶನ ಹಾಗೂ ಡಿಎಸ್ಪಿ ಸುರೇಶ್ ರೆಡ್ಡಿ ಅವರ ಸಲಹೆ ಮತ್ತು ಸಿಪಿಐ ಆನಂದ ಟಕ್ಕನವರ್, ಆನಂದ ದೋಣಿ ನೇತೃತ್ವದ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿದೆ.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)