ಗರ್ಭಿಣಿ ಹೊತ್ತು ತರುತ್ತಿದ್ದ ಆಂಬುಲೆನ್ಸ್ ಅಪಘಾತ….. ಅಯ್ಯಯ್ಯೋ…..ಎಲ್ಲಿ? ಹೇಗಾಯ್ತು?
ಸರಕಾರ ನ್ಯೂಸ್ ಬ.ಬಾಗೇವಾಡಿ
ಗರ್ಭಿಣಿಯನ್ನು ಕರೆದುಕೊಂಡು ಆಸ್ಪತ್ರೆಗೆ ಬರುತ್ತಿದ್ದ ಆಂಬುಲೆನ್ಸ್ ಅಪಘಾತವಾಗಿದೆ.
ವಿಜಯಪೂರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹೂವಿನಹಿಪ್ಪರಗಿ ರಸ್ತೆಯ ಮಧ್ಯೆ ಶನಿವಾರ ಈ ಘಟನೆ ನಡೆದಿದೆ.
ಆಂಬ್ಯುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.
ಗರ್ಭಿಣಿಯನ್ನು ತಾಳಿಕೋಟಿಯಿಂದ ವಿಜಯಪುರಕ್ಕೆ ಕರೆದು ಕೊಂಡು ಬರುವ ವೇಳೆ ಅಪಘಾತ ಸಂಭವಿಸಿದೆ.
ಗರ್ಭಿಣಿಗೆ ಯಾವುದೇ ತೊಂದರೆ ಆಗಿಲ್ಲ. ಆಂಬ್ಯುಲೆನ್ಸ್ ಡ್ರೈವರ್‌ಗೆ ಸಣ್ಣಪುಟ್ಟ ಗಾಯವಾಗಿದ್ದು ಜಿಲ್ಲಾಸ್ತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)