Uncategorized

ಕಣಕಿ ಟ್ರೈಲರ್‌ ಗೆ ಹೊತ್ತಿದ ಬೆಂಕಿ, ಕ್ಷಣಾರ್ಧದಲ್ಲೇ ಭಸ್ಮ !

ಸರಕಾರ್‌ ನ್ಯೂಸ್‌ ಬಬಲೇಶ್ವರ

ಕಣಕಿ ತುಂಬಿಕೊಂಡು ಹೊರಟಿದ್ನಿಂದ  ಟ್ರ್ಯಾಕ್ಟರ್‌ ಟ್ರೈಲಿಗೆ ಬೆಂಕಿ ಹೊತ್ತಿಕೊಂಡ ಕ್ಷಣಾರ್ಧದಲ್ಲೇ ಭಸ್ಮವಾದ ಘಟನೆ ಶನಿವಾರ ನಡೆದಿದೆ.

ಬಬಲೇಶ್ವರ ತಾಲೂಕಿನ ದೇವಾಪೂರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರೈತನೋರ್ವ ಧನಕರು ಗಳಿಗಾಗಿ  ಟ್ರ್ಯಾಕ್ಟರ್‌ನಲ್ಲಿ ಕಣಕಿ ತರುವಾಗ ವಿದ್ಯುತ್ ತಂತಿ ಕಣಕಿಗೆ ತಗುಲಿ ಬೆಂಕಿ ಹೊತ್ತಿದೆ.  ಪರಿಣಾಮವಾಗಿ ಕಣಕಿ ಭಸ್ಮವಾಗಿದೆ.

ಪಕ್ಕದಲ್ಲಿಯೇ ನೂರಾರು ಎಕರೆ ಕಬ್ಬಿನ ಗದ್ದೆಗಳಿದ್ದವು ಹೀಗಾಗಿ ಕೂಡಲೇ ಗ್ರಾಮಸ್ಥರು ಎಲ್ಲ ಸೇರಿ ಬೆಂಕಿ ನಂದಿಸಿದರು. ಅಲ್ಲದೇ ವಿದ್ಯುತ್‌ ತಂತಿ ಅತ್ಯಂತ ಕೆಳಮಟ್ಟದಲ್ಲಿ ಜೋತು ಬಿದ್ದಿದ್ದರೂ ಈವರೆಗೆ ಅವಗಳನ್ನು ಎತ್ತರಕ್ಕೆ ಏರಿಸದ ಹೆಸ್ಕಾಂ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ಹೊರಹಾಕಿದರು.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್‌ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!