ನಮ್ಮ ವಿಜಯಪುರ

ಪ್ರೀತಿಸಿ ಮದುವೆಯಾದ ನವ ವಿವಾಹಿತರು ನೇಣಿಗೆ ಶರಣು, ಅಯ್ಯಯ್ಯೋ ಏನಾಗಿತ್ತು ಇವರಿಗೆ?

ಸರಕಾರ ನ್ಯೂಸ್ ವಿಜಯಪುರ

ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ನವ ಜೋಡಿಯೊಂದು ಆತ್ಮಹತ್ಯೆಗೆ ಶರಣಾಗಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ.

ವಿಜಯಪುರ ‌ನಗರದ ಹೊರ ವಲಯದ ಶ್ರೀ ಸಿದ್ದೇಶ್ವರ ಬಡಾವಣೆಯ ಮನೆಯಲ್ಲಿ ಮನೋಜಕುಮಾರ ಪೋಳ (30) ಹಾಗೂ ರಾಖಿ (23) ನೇಣಿಗೆ ಶರಣಾಗಿದ್ದಾರೆ.

ಕಳೆದ ನಾಲ್ಕು ತಿಂಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಇವರು ಮಂಗಳವಾರ ತಡರಾತ್ರಿ ಊಟ ಮಾಡಿದ ಬಳಿಕ ನೇಣಿಗೆ ಶರಣಾಗಿದ್ದಾರೆನ್ನಲಾಗಿದೆ.

ಆಟವಾಡುತ್ತಾ ಮನೆಯಿಂದ ಹೋಗಿದ್ದ ಮಕ್ಕಳು ಶವವಾಗಿ ಪತ್ತೆ ! ಅಯ್ಯೋ…ಹೇಗಾಯ್ತು? ಏನಾಯ್ತು?

ಮನೋಜಕುಮಾರ ಹಾಗೂ ರಾಖಿ ಇಬ್ಬರೇ ಮನೆಯಲ್ಲಿದ್ದರು.
ಮನೋಜಕುಮಾರ ತಾಯಿ ಭಾರತಿ ಮಗಳ ಊರಿಗೆ ಹೋಗಿದ್ದರು. ಬುಧವಾರ ಬೆಳಗ್ಗೆ ವಾಪಸ್ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಜಲನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)

error: Content is protected !!