ಯುಗಾದಿ ಹಬ್ಬದ ನಿಮಿತ್ಯ ಶ್ರೀಶೈಲ ಶ್ರೀಮಲ್ಲಿಕಾರ್ಜುನ ಜಾತ್ರೆಗೆ ವಿಶೇಷ ಸಾರಿಗೆ ವ್ಯವಸ್ಥೆ, ಭಕ್ತಾದಿಗಳ ಅನುಕೂಲಕ್ಕಾಗಿ ಹೆಚ್ಚು ಹೆಚ್ಚು ಶೇರ್ ಮಾಡಿ
ವಿಜಯಪುರ: ಪ್ರತಿ ವರ್ಷದಂತೆ ಈ ವರ್ಷವೂ ಯುಗಾದಿ ಹಬ್ಬದ ನಿಮಿತ್ಯ, ದಿನಾಂಕ: 25-03-2022ರಿಂದ 04-04-2022 ರವರೆಗೆ ಶ್ರೀಶೈಲದಲ್ಲಿ ಜರಗುವ ಶ್ರೀಮಲ್ಲಿಕಾರ್ಜುನ ಸ್ವಾಮಿ ಜಾತ್ರೆಯ ನಿಮಿತ್ಯ ಯಾತ್ರಾರ್ಥಿಗಳಿಗಾಗಿ ವಿಶೇಷ ಸಾರಿಗೆಗಳ ಕಾರ್ಯಾಚರಣೆ ಮಾಡಲಾಗುವುದು ಎಂದು ವಿಜಯಪುರ ವಿಭಾಗದ ಕಕರಸಾ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾಂತ ಪುಲೇಕರ ತಿಳಿಸಿದ್ದಾರೆ.
ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ವಿಜಯಪುರ ವಿಭಾಗದ ಕಕರಸಾ ನಿಗಮದಿಂದ ವಿಜಯಪುರ, ಇಂಡಿ, ಸಿಂದಗಿ, ಮುದ್ದೇಬಿಹಾಳ, ತಾಳಿಕೋಟ, ಬ.ಬಾಗೇವಾಡಿ ಘಟಕ ಕೇಂದ್ರ ಸ್ಥಾನಗಳಿಂದ ಶ್ರೀಮಲ್ಲಿಕಾರ್ಜುನ ಸ್ವಾಮಿ ಜಾತ್ರೆಯ ನಿಮಿತ್ಯ ಯಾತ್ರಾರ್ಥಿಗಳಿಗಾಗಿ ವಿಶೇಷ ಸಾರಿಗೆಗಳ ಕಾರ್ಯಾಚರಣೆ ಮಾಡಲಾಗುವುದು.
ಪ್ರಯಾಣಿಕರಿಗೆ ವಿಜಯಪುರ ಕೇಂದ್ರ ಬಸ್ ನಿಲ್ದಾಣ ಹಾಗೂ ಎಲ್ಲ ಘಟಕಗಳ ಬಸ್ ನಿಲ್ದಾಣಗಳಲ್ಲಿ ಮುಂಗಡ ಟಿಕೇಟ ಕಾಯ್ದಿರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.
ಒಂದೇ ಗುಂಪಿನಿಂದ ಪ್ರಯಾಣಿಸಲು ಕನಿಷ್ಟ 45 ರಿಂದ 55 ಜನ ಪ್ರಯಾಣಿಕರು ಲಭ್ಯವಾದಲ್ಲಿ ದಾರಿ ಮಧ್ಯ ಬರುವ ಯಾತ್ರಾ ಸ್ಥಳಗಳ ದರ್ಶನ ಮಾಡಿಸಲಾಗುವುದು. ಹಾಗೂ ಉಚಿತ ಅನ್ನ ಸಂತರ್ಪಣೆ ಸ್ಥಳಗಳಲ್ಲಿ ಊಟಕ್ಕಾಗಿ ಕಾಲಾವಕಾಶ ಕೊಡಲಾಗುವುದು.
ಘಟಕ ಕೇಂದ್ರ ಸ್ಥಾನದಿಂದ ಹೆಚ್ಚುವರಿ ಬಸ್ಸುಗಳಲ್ಲದೆ, ಪ್ರಯಾಣಿಕರು ಇಚ್ಛಿಸಿದಲ್ಲಿ ಅವರ ಸ್ವಗ್ರಾಮಗಳಿಂದ ನೇರವಾಗಿ ಶ್ರೀಶೈಲಕ್ಕೆ ಸಾರಿಗೆ ವ್ಯವಸ್ಥೆ ಒದಗಿಸಲಾಗುವದು.
ಪ್ರಯಾಣಿಕರು ಮಂತ್ರಾಲಯ ಹಾಗೂ ಮಹಾನಂದಿ ದರ್ಶನ ಮಾಡಲು ಇಚ್ಚಿಸಿದಲ್ಲಿ ಸದರಿ ಸ್ಥಳಗಳಿಗೆ ತಗಲುವ ಪ್ರಯಾಣ ದರವನ್ನು ಪಾವತಿಸಿದಲ್ಲಿ ಮಂತ್ರಾಲಯ ಹಾಗೂ ಮಹಾನಂದಿಗೆ ಕಾರ್ಯಾಚರಣೆ ಮಾಡಲಾಗುವುದು.
ಪ್ರಯಾಣಿಕರು ಸಾರಿಗೆ ಸೌಲಭ್ಯಕ್ಕಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ತೋರಿಸಿದ ಸಂಸ್ಥೆಯ ಅಧಿಕಾರಿಗಳ ದೂರವಾಣಿಗಳನ್ನು ಸಂಪರ್ಕಿಸಬಹುದಾಗಿದೆ.
ವಿಭಾಗೀಯ ತಾಂತ್ರಿಕ ಶಿಲ್ಪಿ ವಿಜಯಪುರ -7760992251, ಘಟಕ ವ್ಯವಸ್ಥಾಪಕರು, ವಿಜಯಪುರ ಘಟಕ-1- 7760992263, ಘಟಕ ವ್ಯವಸ್ಥಾಪಕರು, ವಿಜಯಪುರ ಘಟಕ-2-7760992264, ಘಟಕ ವ್ಯವಸ್ಥಾಪಕರು, ಇಂಡಿ-7760992265, ಘಟಕ ವ್ಯವಸ್ಥಾಪಕರು, ಸಿಂದಗಿ-7760992266, ಘಟಕ ವ್ಯವಸ್ಥಾಪಕರು, ಮುದ್ದೇಬಿಹಾಳ-7760992267, ಘಟಕ ವ್ಯವಸ್ಥಾಪಕರು, ತಾಳಿಕೋಟ-7760992268, ಘಟಕ ವ್ಯವಸ್ಥಾಪಕರು ಬ. ಬಾಗೇವಾಡಿ -7760998869, ನಿಲ್ದಾಣಾಧಿಕಾರಿ ಕೇಂದ್ರ ಬಸ್ ನಿಲ್ದಾಣ ವಿಜಯಪುರ -7760992258, ಕೇಂದ್ರ ಬಸ್ ನಿಲ್ದಾಣ ವಿಜಯಪುರ – 08352-251344 ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ವಿಭಾಗೀಯ ಸಾರಿಗೆ ಅಧಿಕಾರಿ ವಿಜಯಪುರ ದೂರವಾಣಿ ಸಂಖ್ಯೆ 7760992252 ಕ್ಕೆ ಸಂಪರ್ಕಿಸಲು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.