ಚುನಾವಣಾ ಕರ್ತವ್ಯ ಲೋಪ, ಲೆಕ್ಕ ಸಹಾಯಕ ಅಮಾನತ್ತುಗೊಳಿಸಿ ಡಿಸಿ ಆದೇಶ
ಸರಕಾರ ನ್ಯೂಸ್ ವಿಜಯಪುರ
ಚುನಾವಣಾ ಕರ್ತವ್ಯಕ್ಕೆ ಗೈರು ಹಾಜರಾಗಿ, ನಿಷ್ಕಾಳಜಿತನ ತೋರಿ ಕರ್ತವ್ಯಲೋಪವೆಸಗಿರುವ ಆಲಮೇಲದ ಕಾಡಾ ಕಚೇರಿಯ ಲೆಕ್ಕ ಸಹಾಯಕ ರಮೇಶ ಬಗಲಿ ವಿರುದ್ಧ ಇಲಾಖಾ ವಿಚಾರಣೆ ಬಾಕಿ ಇರಿಸಿ,ಕರ್ನಾಟಕ ನಾಗರೀಕ ಸೇವಾ ನಿಯಮಗಳನ್ವಯ ಸೇವೆಯಿಂದ ಅಮಾನತ್ತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಆದೇಶಿಸಿದ್ದಾರೆ.
ಅಮಾನತ್ತಾದ ಲೆಕ್ಕ ಸಹಾಯಕ ಮೇಲಾಧಿಕಾರಿಗಳ ಅನುಮತಿ ಇಲ್ಲದೇ ಕೇಂದ್ರಸ್ಥಾನ ಬಿಡುವಂತಿಲ್ಲ ಹಾಗೂ ಕರ್ನಾಟಕ ನಾಗರೀಕ ಸೇವಾ ನಿಯಮ 98ರನ್ವಯ ಜೀವನಾಂಶ ಭತ್ಯೆ ಪಡೆಯಲು ಅರ್ಹತೆ ಹೊಂದಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.