ವಿಜಯಪುರ

ಅಬಕಾರಿ ದಾಳಿ, ಜಿಲ್ಲೆಯಾದ್ಯಂತ 74.90 ಲಕ್ಷ ರೂ. ಮೌಲ್ಯದ ಅಬಕಾರಿ ವಸ್ತುಗಳ ಜಪ್ತಿ !

ಸರಕಾರ ನ್ಯೂಸ್ ವಿಜಯಪುರ

ಸಾರ್ವತ್ರಿಕ ವಿಧಾನಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾದ ದಿನದಿಂದ ಏಪ್ರಿಲ್ 16ರವರೆಗೆ ಜಿಲ್ಲೆಯಲ್ಲಿ ವಿವಿಧೆಡೆ ಅಬಕಾರಿ ದಾಳಿ ನಡೆಸಿ 74,90,837 ರೂ. ಮೌಲ್ಯದ ಅಬಕಾರಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆ ಉಪ ಆಯುಕ್ತರು ತಿಳಿಸಿದ್ದಾರೆ.

ಚುನಾವಣೆಯನ್ನು ಅತ್ಯಂತ ನಿಷ್ಪಕ್ಷಪಾತ ಹಾಗೂ ಶಾಂತಿಯುತವಾಗಿ ನಡೆಸುವ ದೃಷ್ಟಿಯಿಂದ ಅಬಕಾರಿ ಇಲಾಖೆಯಿಂದ ವಿವಿಧ ಕ್ರಮ ಕೈಗೊಳ್ಳಲಾಗಿದ್ದು, ಈವರೆಗೆ 510 ಅಬಕಾರಿ ದಾಳಿ ನಡೆಸಿ, 59 ಘೋರ, 10 ಬಿಎಲ್ಸಿ ಹಾಗೂ 15(ಎ) 379 ಪ್ರಕರಣಗಳು ಸೇರಿದಂತೆ 448 ಪ್ರಕರಣಗಳನ್ನು ದಾಖಲಿಸಿ, 535 ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 3,25,206 ರೂ. ಮೌಲ್ಯದ 773.37 ಲೀ. ಮದ್ಯ, 6,400 ರೂ. ಮೌಲ್ಯದ 7.2 ಲೀ. ಹೊರ ರಾಜ್ಯದ ಮದ್ಯ, 19,88,881 ರೂ. ಮೌಲ್ಯದ 8,459.30 ಲೀ. ಬೀಯರ್, 11,950 ರೂ. ಮೌಲ್ಯದ 119.5 ಲೀ. ಕಳ್ಳಭಟ್ಟಿ ಸರಾಯಿ ಹಾಗೂ 400 ರೂ.ಮೌಲ್ಯದ 04 ಲೀ.ಸೇಂಧಿ ಸೇರಿದಂತೆ, 23,32,837 ರೂ. ಮೌಲ್ಯದ 9,363.210 ಲೀ. ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ಅದರಂತೆ, ಅಬಕಾರಿ ಅಕ್ರಮಕ್ಕೆ ಬಳಸಿಕೊಳ್ಳುತ್ತಿರುವ 25,28,000 ರೂ. ಮೌಲ್ಯದ 43 ದ್ವಿಚಕ್ರ ವಾಹನ,11 ಲಕ್ಷ ರೂ. ಮೌಲ್ಯದ 02 ನಾಲ್ಕು ಚಕ್ರ ವಾಹನ ಹಾಗೂ 15 ಲಕ್ಷ ರೂ. ಮೌಲ್ಯದ 01 ಬೃಹತ್ ವಾಹನ ಸೇರಿದಂತೆ ಒಟ್ಟು 51,58,000 ರೂ. ಮೌಲ್ಯದ 46 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

error: Content is protected !!