ಶುಗರ್ ಫ್ಯಾಕ್ಟರಿ ಪರವಾನಿಗೆ ಕೊಡಿಸುವುದಾಗಿ ಹೇಳಿ ವಂಚನೆ, ರೂ.6 ಕೋಟಿಗೂ ಅಧಿಕ ಹಣ ಕಳೆದುಕೊಂಡ ವ್ಯಾಪಾರಿ !
ಸರಕಾರ ನ್ಯೂಸ್ ವಿಜಯಪುರ
ಶುಗರ್ ಫ್ಯಾಕ್ಟರಿ ಪರವಾನಿಗೆ ಕೊಡಿಸುವಾಗಿ ಹೇಳಿ 6 ಕೋಟಿ 2 ಲಕ್ಷ ರೂಪಾಯಿ ವಂಚನೆಗೈದ ಪ್ರಕರಣ ಬೆಳಕಿಗೆ ಬಂದಿದೆ.
ಇಲ್ಲಿನ ಆದರ್ಶ ನಗರದ ಆಶ್ರಮ ರಸ್ತೆಯ ವ್ಯಾಪಾರಿ ಅಜೀತಕುಮಾರ ಬಾಳಾಸಾಹೇಬ ಕುಚನೂರ ಎಂಬುವರು ಮೋಸಕ್ಕೆ ಒಳಗಾಗಿದ್ದಾರೆ.
ಬಳ್ಳಾರಿಯ ಬಿ.ವೀರಭದ್ರಪ್ಪ, ಈತನ ಪತ್ನಿ ಬಿ. ಕವಿತಾ ಹಾಗೂ ಇತರರು ಕೂಡಿಕೊಂಡು ಹಣ ಪಡೆಯುವ ದುರುದ್ಧೇಶದಿಂದ ಶುಗರ್ ಫ್ಯಾಕ್ಟರಿ ಪರವಾನಿಗೆ ಕೊಡಿಸುವುದಾಗಿ ಸುಳ್ಳು ಹೇಳಿ ಬೇರೆ ಬೇರೆ ಅಧಿಕಾರಿಗಳಂತೆ ನಟಿಸಿ ವಂಚನೆಗೈದಿದ್ದಾರೆ.
ಅಲ್ಲದೇ,
ಲಾರಿ ಕ್ಯಾಬಿನ್‌ನಲ್ಲಿದ್ದ 10 ಲಕ್ಷ ರೂಪಾಯಿ ಗಾಯಾಬ್, ಸಂಡಾಸಕ್ಕೆ ಹೋಗಿ ಬರುವಷ್ಟರಲ್ಲಿಯೇ ಹಣ ಎಗರಿಸಿದ ಭೂಪರು !!!
ಹೆದರಿಸಿ, ಬೆದರಿಸಿ ಹಂತ ಹಂತವಾಗಿ 6 ಕೋಟಿ 2 ಲಕ್ಷ ರೂಪಾಯಿಯನ್ನು ಪಡೆದಿದ್ದಾರೆ.
ಹೀಗಾಗಿ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಅಜೀತಕುಮಾರ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)