ಜಿಲ್ಲೆನಮ್ಮ ವಿಜಯಪುರ

ವಿಜಯಪುರ – ಸರಗಳ್ಳನ ಬಂಧನ


ವಿಜಯಪುರ: ಕಳೆದ ಕೆಲ ದಿನಗಳ ಹಿಂದೆ ನಡೆದ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
ಸ್ಥಳೀಯ ಬಸವ ನಗರದ ನಿವಾಸಿ ದಾವಲಮಲೀಕ್ ಊರ್ಫ್ ದೌಲು ಭಾಷಾಸಾಹೇಬ ಚಪ್ಪರಬಂದ್ (23) ಬಂಧಿತ ಆರೋಪಿ. ಒಟ್ಟು ಮೂರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾಗಿ ದೌಲು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.
ಈತನಿಂದ 85 ಗ್ರಾಂ ಬಂಗಾರದ ಆಭರಣ ಸೇರಿ ಒಟ್ಟು 4.25 ಲಕ್ಷ ರೂ.ಮೌಲ್ಯದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎಸ್‌ಪಿ ಆನಂದಕುಮಾರ ಹಾಗೂ ಎಎಸ್‌ಪಿ ಡಾ.ರಾಮ ಅರಸಿದ್ದಿ ಹಾಗೂ ಡಿವೈಎಸ್‌ಪಿ ಕೆ.ಸಿ. ಲಕ್ಷ್ಮಿ ನಾರಾಯಣ ಮಾರ್ಗದರ್ಶನದಲ್ಲಿ ಸಿಪಿಐ ರಮೇಶ ಅವಜಿ ನೇತೃತ್ವದ ಪಿಎಸ್‌ಐ ಸೋಮೇಶ ಗೆಜ್ಜಿ, ಪಿಎಸ್ ಎಸ್.ಸಿ.ಗುರುಬೇಟ್ಟಿ, ಸಿಬ್ಬಂದಿ ಎಸ್.ಎಸ್. ಮಾಳೆಗಾಂವ, ಪಿ.ಆರ್. ಹಿಪ್ಪರಗಿ, ವೈ.ಪಿ. ಕಬಾಡೆ, ಎಸ್.ಪಿ. ಲೋಗಾಂವಿ, ಎಸ್.ಜಿ. ಗಾಯನ್ನವರ, ಎಸ್.ಎ. ಬನಪಟ್ಟಿ, ಮಹೇಶ ಸಾಲಿಕೇರಿ, ಜೆ.ಎಸ್. ವನಜಕರ, ಬಸವರಾಜ ರೋಣಿಹಾಳ, ಆನಂದ ಕಂಬಾರ, ಎಸ್.ಪಿ. ಕಾಖಂಡಕಿ, ಗುಂಡು ಗಿರಣಿವಡ್ಡರ, ಸುನೀಲ ಗೌಳಿ, ನಿಂಗಪ್ಪ ವಠಾರ ಒಳಗೊಂಡ ತಂಡ ಆರೋಪಿಯನ್ನು ಬಂಧಿಸಿದೆ.

error: Content is protected !!