ಕ್ಯಾಂಟರ್ ಅಡ್ಡಗಟ್ಟಿ ದರೋಡೆ, ರೂ. 32 ಲಕ್ಷ ನಗದು ದೋಚಿ ಪರಾರಿ !
ಸರಕಾರ ನ್ಯೂಸ್ ಕೊಲ್ಹಾರ
ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ಯಾಂಟರ್ ಅಡ್ಡಗಟ್ಟಿದ ದುಷ್ಕರ್ಮಿಗಳು ಚಾಲಕನ ಮೇಲೆ ಹಲ್ಲೆ ನಡೆಸಿ ರೂ. 32 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ.
ಕೊಲ್ಹಾರ ಪಟ್ಟಣದ ಹೊರ ಭಾಗದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಹತ್ತಿ ಮಾರಾಟ ಮಾಡಿ ಬಂದ ಹಣ ತೆಗೆದುಕೊಂಡು ವಾಪಸ್ ತೆರಳುತ್ತಿದ್ದ ಕಲಬುರಗಿ ಜಿಲ್ಲೆ ಜೀವರ್ಗಿ ಪಟ್ಟಣದ ಹತ್ತಿ ವ್ಯಾಪಾರಿ ಚಂದ್ರಕಾಂತ ಕುಂಬಾರ ಎಂಬುವವರಿಗೆ ಸೇರಿದ ಹಣ ದೋಚಲಾಗಿದೆ.
ಪ್ರೀತಿಸಿ ಮದುವೆಯಾದ ನವ ವಿವಾಹಿತರು ನೇಣಿಗೆ ಶರಣು, ಅಯ್ಯಯ್ಯೋ ಏನಾಗಿತ್ತು ಇವರಿಗೆ?
ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದಲ್ಲಿರೋ ಹತ್ತಿ ಕಾರ್ಖಾನೆಗೆ ಹತ್ತಿ ಮಾರಾಟ ಮಾಡಿ 32 ಲಕ್ಷ ರೂಪಾಯಿಯೊಂದಿಗೆ ವಾಪಸ್ ಜೀವರ್ಗಿಗೆ ತೆರಳುತ್ತಿದ್ದ ವೇಳೆ ದರೋಡೆ ನಡೆದಿದೆ.
ಕ್ಯಾಂಟರ್ ನಲ್ಲಿ ಹತ್ತಿ ತಂದಿದ್ದ ವ್ಯಾಪಾರಿ ಚಂದ್ರಕಾಂತ ಅವರ ಕ್ಯಾಂಟರ್ ಚಾಲಕ ಮಹಾಂತೇಶ ಕುಂಬಾರ ಹಾಗೂ ಸಹಾಯಕ ಮಲ್ಲು ಕೊಡಚಿ ಹತ್ತಿ ಮಾರಾಟ ಮಾಡಿ ರೈತರಿಗೆ ಕೊಡಬೇಕಿದ್ದ 32 ಲಕ್ಷ ರೂಪಾಯಿ ತರುತ್ತಿದ್ದ ವೇಳೆ ಕೊಲ್ಹಾರ ಪಟ್ಟಣದ ಬಳಿ ಕ್ಯಾಂಟರ್‌ಗೆ ಬುಲೆರೋ ವಾಹನದಿಂದ ಅಡ್ಡಗಟ್ಟಿದ ಖದೀಮರು, ಕ್ಯಾಂಟರ್ ಗಾಜಿಗೆ ಕಲ್ಲು, ರಾಡ್‌ನಿಂದ ಹೊಡೆದಿದ್ದಾರೆ.
ಕ್ಯಾಂಟರ್‌ನಲ್ಲಿದ್ದವರ ಕಣ್ಣಿಗೆ ಖಾರದ ಪುಡಿ ಎರಚಿ ಹಣ ಪಡೆದು ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದ ಮಹಾಂತೇಶ ಹಾಗೂ ಮಲ್ಲು ಕೊಡಚಿಗೆ ಕೊಲ್ಹಾರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)