ದರ್ಗಾ ಜೈಲ್ ನಲ್ಲಿ ಕರಾಮತ್ತು, ಚಿಕನ್ ಪೀಸ್ ನಲ್ಲಿ ಗಾಂಜಾ ಸಾಗಾಟ, ಸಿಕ್ಕಿ ಬಿದ್ದಿದ್ದು ಹೇಗೆ ಗೊತ್ತಾ?
ಸರಕಾರ್ ನ್ಯೂಸ್ ವಿಜಯಪುರ
ಜೈಲುಗಳಲ್ಲಿ ಗಾಂಜಾ, ಅಫೀಮು, ಮದ್ಯ ಮತ್ತಿತರ ಮಾದಕ ವಸ್ತುಗಳ ಸಾಗಾಟ ಸುದ್ದಿ ಆಗಾಗ ಸದ್ದು ಮಾಡುತ್ತಲೇ ಇರುತ್ತದೆ.
ಆದರೆ, ವಿಜಯಪುರ ದರ್ಗಾದ ಜೈಲ್ ನಲ್ಲಿ ಮಾದಕ ವಸ್ತುಗಳ ಸುದ್ದಿ ಜೋರಾಗಿಯೇ ಸದ್ದು ಮಾಡಿದ್ದು, ಪ್ರಕರಣ ಬೇಧಿಸಿದ ಜೈಲು ಸಿಬ್ಬಂದಿ ಕಾರ್ಯ ಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಜೈಲಿನಲ್ಲಿರುವ ಕೈದಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಪ್ರಜ್ವಲ್ ಲಕ್ಷ್ಮಣ ಮಾಬರುಖಾನೆಯನ್ನು ಬಂಧಿಸಿದ ಪೊಲೀಸರು ಆತನಿಂದ 2 ಗ್ರಾಂನಷ್ಟು ಗಾಂಜಾ ತುಂಬಿದ ಒಟ್ಟು 18 ಗಾಂಜಾ ಚೀಟಿ ವಶಕ್ಕೆ ಪಡೆದಿದ್ದಾರೆ.
ದೊಡ್ಡ ದೊಡ್ಡ ಚಿಕನ್ ಪೀಸ್ ನಲ್ಲಿ ಗಾಂಜಾ ಇರಿಸಿ ಅದಕ್ಕೆ ಹೊಲಿಗೆ ಹಾಕಿ ಕೈದಿಗೆ ಸರಬರಾಜು ಮಾಡುತ್ತಿದ್ದ ಈತನನ್ನು ಪೊಲೀಸರು ಚಾಣಾಕ್ಷತೆಯಿಂದ ಬಂಧಿಸಿದ್ದಾರೆ.
ಚಿಕನ್ ಪೀಸ್ ನಲ್ಲಿ ಗಾಂಜಾ ತುಂಬಿದ ಪ್ಲಾಸ್ಟಿಕ್ ಚೀಟಿ ಇರಿಸಿ ಅಚ್ಚುಕಟ್ಟಾಗಿ ಹೊಲಿಗೆ ಹಾಕಿ ಸರಬರಾಜು ಮಾಡುತ್ತಿದ್ದ ಈತನನ್ನು ಬಂಧಿಸಿರುವ ಜೈಲು ಸಿಬ್ಬಂದಿ
ಆದರ್ಶನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.