ಎಸ್‌ಡಿಪಿಐ-ಪಿಎಫ್‌ಐ ಬಿಜೆಪಿಯ ಬಿ ಟೀಮ್, ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಆರೋಪ, ದರ್ಗಾ ಜೈಲ್‌ಗೆ ಮುತಾಲಿಕ್ ಭೇಟಿ ನೀಡಿದ್ದೇಕೆ?
ಸರಕಾರ್ ನ್ಯೂಸ್ ವಿಜಯಪುರ
ಕಾಂಗ್ರೆಸ್ ಮತ್ತು ಇತರೆ ವಿರೋಧ ಪಕ್ಷಗಳು ಆರೋಪಿಸುವಂತೆ ಎಸ್‌ಡಿಪಿಐ ಮತ್ತು ಪಿಎಫ್‌ಐ ಬಿಜೆಪಿಯ ಬಿ ಟೀಂ ಎಂಬುದು ನೂರಕ್ಕೆ ನೂರು ಸತ್ಯ. ಬಿಜೆಪಿ ಎಸ್‌ಡಿಪಿಐ ಮತ್ತುಪಿಎಫ್ ಐ ಮೂಲಕ ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಆರೋಪಿಸಿದರು.
ಬಿಜೆಪಿಗೆ ದೇಶದ ಮತ್ತು ಹಿಂದೂ ಕಾರ್ಯಕರ್ತರ ಸುರಕ್ಷತೆ ಬೇಕಿಲ್ಲ. ಅಧಿಕಾರವೊಂದೇ ಮುಖ್ಯ ಎಂದು ಅವರು ಕಿಡಿ ಕಾರಿದರು.
ಶುಕ್ರವಾರ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಕೆರೂರ ಘಟನೆಗೆ ಸಂಬಂಧಿಸಿದಂತೆ ಬಂಧಿತವಾಗಿರುವ ಹಿಂದೂ ಕಾರ್ಯಕರ್ತರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಪಿಎಫ್‌ಐ, ಎಸ್‌ಡಿಪಿಐ ಇದೊಂದು ಕ್ಯಾನ್ಸ್ ರ್ ಇದ್ದ ಹಾಗೆ. ಭಯೋತ್ಪಾದಕರು. ಪ್ರಜಾಪ್ರಭುತ್ವ ವಿರೋಧಿಗಳು. ಇಂಥ ಸಂಘಟನೆ ಬ್ಯಾನ್ ಬಗ್ಗೆ ಬಿಜೆಪಿಯವರುಮಾತಾಡಲ್ಲ. ಕಾರಣ ಇಷ್ಟೆ. ಪಿಎಫ್‌ಐ, ಎಸ್‌ಡಿಪಿಐ ಮೂಲಕ ಅಧಿಕಾರಕ್ಕೆ ಬರಬೇಕೆಂಬುವುದ ಬಿಜೆಪಿಗರ ಉದ್ದೇಶ. ಮುಂದಿನ ತಿಂಗಳಿಂದ ಪಿಎಫ್‌ಐ, ಎಸ್‌ಡಿಪಿಐ ಬ್ಯಾನ್ ಮಾಡಲು ಹೋರಾಟ ನಡೆಸಲಾಗುವುದು ಎಂದರು.
ಇನ್ನು ಕೆರೂರ ಘಟನೆ ಪಟ್ಟಣದ ಮೂಲಕ ಇಸ್ಲಾಂ ಹೇಗೆ ಹರಡುತ್ತಿದೆ ಎಂಬುದು ಗೊತ್ತಾಗಲಿದೆ. ಹಿಂದು ಹುಡುಗಿಯರನ್ನು ಚುಡಾಯಿಸುವುದನ್ನು ತಡೆಯಲು ಹೋದಾಗ ಈ ಘಟನೆ ನಡೆದಿದೆ. ಹಿಂದು ಹುಡುಗಿಯರನ್ನು ಚುಡಾಯಿಸುವುದು ತಡೆಯುವುದು ತಪ್ಪಾ? ಎಂದು ಪ್ರಶ್ನಿಸಿದರು.
ಈ ದೇಶದ ಸಂವಿಧಾನದ ಆಧಾರದ ಮೇಲೆ ಹೋರಾಟ ಮಾಡಿ. ಅದನ್ನು ಬಿಟ್ಟು ಚಾಕು ಅಥವಾ ತಲವಾರ್ ಹಿಡಿದುಕೊಂಡು ಬರಲು ಇದು ತಾಲಿಬಾನ್ ಅಲ್ಲ ಎಂದು ಮುಸ್ಲಿಂರ ವಿರುದ್ಧ ಕಿಡಿಕಾರಿದರು. ತಲವಾರ್, ಕೊಲೆ ಮುಖ್ಯ ಎಂದರೆ ಮುಸ್ಲಿಂರಿಗೆ ಈದೇಶದಲ್ಲಿ ಜಾಗ ಇಲ್ಲ. ಬೇರೆ ಎಲ್ಲಾದರೂ ಹೋಗಿ ಬದುಕಿ ಎಂದರು.
ಹರ್ಷನ ಕೊಲೆಯ ಕೊಲೆಗಡುಕರು ಜೈಲಲ್ಲಿ ವಿಡಿಯೋ ಕಾಲ್ ಮಾಡಿ ಆನಂದವಾಗಿ ಮಾತನಾಡುತ್ತಾರೆಂದರೆ ಜೈಲುಗಳೇನು ಲಾಡ್ಜ್ ಗಳಾ? ಬಿಜೆಪಿಯ ವಿಫಲತೆ ಇದು. ಈ ವಿಫಲತೆಯಿಂದ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿಗೆ ಹಿಂದೂಗಳು ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದರು.