ಕೃಷ್ಣಾ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ, ಅಯ್ಯಯ್ಯೋ….ಯಾರೀ ಮಹಿಳೆ? ಏನಾಗಿತ್ತು?
ಸರಕಾರ್ ನ್ಯೂಸ್ ಕೊಲ್ಹಾರ
ಡೆತ್ ಸ್ಪಾಟ್ ಎಂದೇ ಹೆಸರಾದ ಕೊಲ್ಹಾರ ಬೃಹತ್ ಸೇತುವೆ ಮೇಲಿಂದ ಜಿಗಿದು ಮಹಿಳೆಯೋರ್ವಳು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಕೃಷ್ಣ ನದಿಗೆ ಕೊರ್ತಿ ಕೊಲ್ಹಾರದ ಬಳಿ ನಿರ್ಮಿಸಿದ ಸೇತುವೆ ಮೇಲಿಂದ ಹಾರಿದ್ದು, ಇದೀಗ ಮಹಿಳೆ ಶವ ತೇಲುತ್ತಿದೆ.
ಕೋಲ್ಹಾರ ತಾಲೂಕಿನ ಮಟ್ಟಿಹಾಳ ಗ್ರಾಮದ ಶಾಂತವ್ವ ಬಸಪ್ಪ ಜಂಬಗಿ(35) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಅನಾರೋಗ್ಯದಿಂದ ಬಳಲುತ್ತಿದ್ದ ಶಾಂತವ್ವ ಮನನೊಂದು ಸೇತುವೆ ಮೇಲಿಂದ ಕೃಷ್ಣ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆನ್ನಲಾಗಿದೆ.
ಘಟನಾ ಸ್ಥಳಕ್ಕೆ ಕೊಲ್ಹಾರ ಪೋಲಿಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)