ಬಾಯಲ್ಲಿ ಬಟ್ಟೆ ತುರುಕಿ ಅತ್ಯಾಚಾರಕ್ಕೆ ಯತ್ನ, ಗಂಡ ಸತ್ತ ಮಹಿಳೆ ಅಂತಾ ಹೀಗಾ ಮಾಡೋದು?
ಸರಕಾರ್ ನ್ಯೂಸ್ ಸಿಂದಗಿ
ಗಂಡ ಸತ್ತ ಮಹಿಳೆಯ ಓಡಿನಿ ಜಗ್ಗಿ ಅದನ್ನು ಬಾಯಲ್ಲಿ ತುರುಕಿ ಹಲ್ಲೆ ಮಾಡಿದ್ದಲ್ಲದೇ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣ ಚಿಕ್ಕ ಸಿಂದಗಿಯಲ್ಲಿ ನಡೆದಿದೆ.
ಗ್ರಾಮದ ರಾಚಮ್ಮ ಸಾತಲಿಂಪ್ಪ ಕುಂಬಾರ (22) ಎಂಬ ಮಹಿಳೆ ಮೇಲೆ ಈ ಕೃತ್ಯ ನಡೆದಿದ್ದು, ಅದೇ ಗ್ರಾಮದ ಶಿವಾನಂದ ನಿಗಡಿ ಈತನ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ವಿವರ:
ರಾಚಮ್ಮಳ ಗಂಡ ತೀರಿಕೊಂಡಿದ್ದು ತವರು ಮನೆಯಾದ ಚಿಕ್ಕಸಿಂದಗಿಯಲ್ಲಿ ತಾಯಿ ಇಂದಿರಾಬಾಯಿ ಜೊತೆ ವಾಸವಾಗಿದ್ದಾಳೆ. ಈಕೆಗೆ ಅಣ್ಣ ಇದ್ದು ಆತ ನಿಪ್ಪಾಣಿಯಲ್ಲಿ ಇರುತ್ತಾನೆ. ತವರು ಮನೆಯ ಪಕ್ಕದಲ್ಲಿಯೇ ಶಿವಾನಂದ ನಿಗಡಿಯ ಮನೆ ಇದ್ದು ಈತ ರಾಚಮ್ಮಳ್ಳಿಗೆ ಆಗಾಗ ಕೈ ಸನ್ನೆ ಮಾಡುವುದು, ಕಣ್ಣು ಹೊಡೆಯುವುದು ಮಾಡುತ್ತಿದ್ದನು. ನ. 28ರಂದು ರಾತ್ರಿ 10ರ ಸುಮಾರಿಗೆ ರಾಚಮ್ಮ ಊಟ ಮಾಡಿ ಪಡಸಾಲೆಯಲ್ಲಿ ಮಲಗಿದ್ದಳು. ತಾಯಿ ಇಂದಿರಾಬಾಯಿ ಬೇರೆ ಕೋಣೆಯಲ್ಲಿ ಮಲಗಿದ್ದಳು.
ರಾತ್ರಿ 10.30ರ ಸುಮಾರಿಗೆ ಶಿವಾನಂದ ರಾಚಮ್ಮಳ ಮನೆಯ ಮಾಳಿಗೆ ಮೇಲೆ ಹೋಗುವ ನಿಚ್ಚಣಿಕೆಯಿಂದ ಒಳಗೆ ಇಳಿದಿದ್ದಾನೆ. ಇಂದಿರಾಬಾಯಿ ಮಲಗಿದ್ದ ಕೋಣೆಯ ಹೊರಗಿನ ಚಿಲಕ ಹಾಕಿದ್ದಾನೆ. ಬಳಿಕ ರಾಚಮ್ಮಳ ಬಳಿ ಬಂದು ಓಡನಿ ಜಗ್ಗಿ ಬಾಯಿಗೆ ತುರುಕಿ ನಿನ್ನನ್ನು ಕೊಂದು ಬಿಡುತ್ತೇನೆಂದು ಹೆದರಿಸಿ ಮೈ ಕೈ ಮುಟ್ಟಿ ಅತ್ಯಾಚಾರ ನಡೆಸಲು ಪ್ರಯತ್ನಿಸಿದ್ದಾನೆ. ಆಗ ಆತನನ್ನು ಒದ್ದ ರಾಚಮ್ಮ ಬಾಯಿಯಲ್ಲಿ ತುರುಕಿದ್ದ ಬಟ್ಟೆ ತೆಗೆದು ಬಾಯಿ ಮಾಡುತ್ತಾ ಓಡಿ ಹೋಗಿ ತಾಯಿ ಮಲಗಿದ್ದ ರೂಮಿನ ಬಾಗಿಲು ಮತ್ತು ಮನೆಯ ಬಾಗಿ ತೆಗೆಯಲಾಗಿ ರಾಚಮ್ಮಳ ತಾಯಿ ಇಂದಿರಾಬಾಯಿ ಹಾಗೂ ಬಸಪ್ಪ ಕುಂಬಾರ ಎಂಬುವರು ಹತ್ತಿರ ಬರುತ್ತಿದ್ದಂತೆ ಶಿವಾನಂದ ಅವರನ್ನು ನೋಡಿ ಅಲ್ಲಿಂದ ಓಡಿ ಹೋಗಿದ್ದಾನೆ. ಈ ಬಗ್ಗೆ ರಾಚಮ್ಮ ಸಿಂದಗಿ ಠಾಣೆಗೆ ದೂರು ನೀಡಿದ್ದು, ಪ್ರಕರಣದ ತನಿಖೆ ನಡೆದಿದೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)