ಪಿಕೆಪಿಎಸ್ ಕಚೇರಿಯಲ್ಲಿ ಕಳ್ಳತನ, ಎಲ್ಲಿ? ಎಷ್ಟು ಹಣ ಕಳುವಾಗಿದೆ?
ಸರಕಾರ್ ನ್ಯೂಸ್ ವಿಜಯಪುರ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕೀಲಿ ಮುರಿದು 87863 ರೂಪಾಯಿ ಕಳವು ಮಾಡಿದ ಘಟನೆ ಇಲ್ಲಿನ ಕನ್ನೂರ ಗ್ರಾಮದಲ್ಲಿ ನಡೆದಿದೆ.
ವಿಜಯಪುರ ತಾಲೂಕಿನ ಕನ್ನೂರ ಗ್ರಾಮದ ನಮ್ಮೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಚೇರಿಯಲ್ಲಿ ಕಳ್ಳತನ ನಡೆದಿದೆ.
ನ.25ರಂದೇ ಕಳ್ಳತನ ನಡೆದಿದ್ದು ಇದೀಗ ಅಂದರೆ ನ. 30ರಂದು ವಿಜಯಪುರ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆ ಪ್ರಕಾರ, ಕೃಷಿ ಪತ್ತಿನ ಸಂಘದ ಶೇಲ್ಸ್ ಮನ್ ಲಕ್ಷ್ಮಿಕಾಂತ ಕಲ್ಲಪ್ಪ ವಾಂಗಿ ಈತ ಅಂದಿನ ವ್ಯವಹಾರದ ಹಣವಾದ 87864 ರೂಪಾಯಿಯನ್ನು ಟೇಬಲ್ ಡ್ರಾದಲ್ಲಿ ಇರಿಸಿ
ಕಚೇರಿ ಬಾಗಿಲು ಹಾಕಿಕೊಂಡು ಹೋಗಿದ್ದಾನೆ. ನ. 26ರಂದು ಸಂಘಕ್ಕೆ ರಜೆ ಇದ್ದು, ನ.27ರದು ಭಾನುವಾರ ಸಂಘದ ಸಿಪಾಯಿ ಬಸವರಾಜ ಬಾಗೇವಾಡಿಗೆ ಫೋನ್ ಮಾಡಿ ಕಚೇರಿಯಲ್ಲಿರುವ ಟಿವಿ ಡಿಸ್ಕ್ ಚತ್ರಿ ತೆಗೆದುಕೊಂಡು ಮನೆಗೆ ಬರಲು ಹೇಳಿದ್ದು, ಆ ಪ್ರಕಾರ ಬೆಳಗ್ಗೆ 8.30ರ ಸುಮಾರಿಗೆ ಬಸವರಾಜ ಸಂಘಕ್ಕೆ ಹೋಗಿ ನೋಡಲಾಗಿಗೇಟ್‌ನ ಕೀಲಿ ಮುರಿದಿದ್ದು ಕಂಡು ಬಂದಿದೆ. ಕೂಡಲೇ ಸಂಘದ ಕೆಲಸಗಾರರಾದ ಮಲ್ಲಪ್ಪ ಈರತಪ್ಪ ಕೌಟೇಕರ, ಸೀತಲ್ನಾಥ ಪಾಶ್ವನಾಥ ಬೋಗಾರ, ಸಂಘದ ಅಧ್ಯಕ್ಷ ಅಪ್ಪಾಸಾಹೇಬ ಬಂಡಿ ಎಲ್ಲರೂ ಸೇರಿ ನೋಡಲಾಗಿ ಗೇಟ್ ಕೀಲಿ ಮುರಿದು ಒಳಗಡೆ ಹೋಗಿ ಸಂಘದ್ದಲ್ಲಿಟ್ಟಿದ್ದ ಹಣ ದೋಚಿದ್ದು ಕಂಡು ಬಂದಿದೆ. ಈ ಬಗ್ಗೆ ಸಂಘದ ಕಾರ್ಯದರ್ಶಿ ರವಿಚಂದ್ರ ಶಿವಲಿಂಗಪ್ಪ ಶಹಾಪುರ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)