ಗೋಳಗುಮ್ಮಟ ಮೇಲಿಂದ ಬಿದ್ದು ಯುವತಿ ಸಾವು, ಈ ಧಾರುಣ ಘಟನೆಗೆ ಕಾರಣವೇನು?
ಸರಕಾರ್ ನ್ಯೂಸ್ ವಿಜಯಪುರ
ಐತಿಹಾಸಿಕ ಗೋಳಗುಮ್ಮಟ ಮೇಲಿಂದ ಬಿದ್ದು ಯುವತಿ ಧಾರುಣವಾಗಿ ಸಾವಿಗೀಡಾಗಿದ್ದಾಳೆ.
ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಸೌಂದರ್ಯ ಬೆಂಗಳೂರ (19) ಮೃತ ಯುವತಿ. ಈಕೆ ಸ್ಥಳೀಯ ರಾಣಿಬಗೀಚ ನಿವಾಸಿ ಎನ್ನಲಾಗಿದ್ದು, ಬುಧವಾರ ಗೋಳಗುಮ್ಮಟ ವೀಕ್ಷಣೆಗಾಗಿ ಬಂದಿದ್ದಳು. ಗುಮಟ್ಟದ ಗ್ಯಾಲರಿಯಲ್ಲಿ ಸುತ್ತಾಡಿದ್ದು ಒಳಭಾಗದಿಂದ ಕೆಳಗೆ ಬಿದ್ದು ಅಸುನೀಗಿದ್ದಾಳೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಗೋಳಗುಮ್ಮಟ ಠಾಣೆ ಪೊಲೀಸರು ದೌಡಾಯಿಸಿದ್ದು ಮಾಹಿತಿ ಕಲೆ ಹಾಕುತ್ತಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)