ವಿಜಯಪುರ

ಇಂಡಿ ಪಟ್ಟಣದಲ್ಲಿ‌ ಸರಣಿ ಮನೆಗಳ್ಳತನ, ಮೂರು ಮನೆಗಳಿಗೆ ಕನ್ನ….!

ಇಂಡಿ: ಬೀಗ ಹಾಕಿದ್ದ ಮನೆಗಳಲ್ಲಿ ಸರಣಿ ಕಳ್ಳತನ ನಡೆದಿದೆ.

ಇಂಡಿ ಪಟ್ಟಣದ ಮಹಾಲಕ್ಷ್ಮಿ ನಗರದಲ್ಲಿ ಭಾನುವಾರ ನಸುಕಿನ ಜಾವ ಈ ಘಟನೆ ನಡೆದಿದೆ.

ಬೀಗ ಹಾಕಿದ್ದ ಮೂರು ಮನೆಗಳಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ.
ಮನೆಯಲ್ಲಿದ್ದ ಚಿನ್ನಾಭರಣ ಕದ್ದು ಖದೀಮರು ಪರಾರಿಯಾಗಿದ್ದಾರೆ.
ಎಷ್ಟು ಪ್ರಮಾಣದ ಚಿನ್ನಾಭರಣ, ನಗದು ಕಳ್ಳತನವಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.
ಇಂಡಿ ಪಟ್ಟಣ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

error: Content is protected !!