ಧೂಳಖೇಡ ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ದಾಳಿ, ಬೆಳ್ಳೆಂಬೆಳಗ್ಗೆ ಶಾಕ್ !
ಸರಕಾರ ನ್ಯೂಸ್ ವಿಜಯಪುರ
ಕರ್ನಾಟಕ ಮಹಾರಾಷ್ಟ್ರ ಗಡಿಭಾಗದ ಧೂಳಖೇಡ ಚೆಕ್ ಪೋಸ್ಟ್ ಮೇಲೆ ಶುಕ್ರವಾರ ಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದೆ.
ಚಡಚಣ ತಾಲೂಕಿನ ಆರ್ ಧೂಳಖೇಡ ಟಿಒ ಚೆಕ್‌ಪೋಸ್ಟ್ ಮೇಲೆ ಲೋಕಾಯುಕ್ತ ಪಿ ಅನಿತಾ ಹದ್ದಣ್ಣವರ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಧೂಳಖೇಡ ಚೆಕ್‌ಪೋಸ್ಟ್‌ನಲ್ಲಿ 3 ರಿಂದ 4 ಲಕ್ಷ ಹಣವನ್ನು ವಶಕ್ಕೆ ಪಡೆದಿದ್ದು,
ಪ್ರಮುಖ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. 7-8 ಹೋಮ್ ಗಾರ್ಡ್‌ಗಳ ವಿಚಾರಣೆ ಹಾಗೂ ಅಗತ್ಯ ದಾಖಲೆ, ಮಾಹಿತಿ ಕಲೆ ಹಾಕಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.