ನಮ್ಮ ವಿಜಯಪುರ

ಪ್ರತ್ಯೇಕ ಕೊಲೆ ಪ್ರಕರಣ, ಹಿರೇಮಸಳಿಯ ಕಲ್ಲಪ್ಪ ಸೇರಿ ಇಬ್ಬರ ಬಂಧನ

ಸರಕಾರ್ ನ್ಯೂಸ್ ವಿಜಯಪುರ

ಪ್ರತ್ಯೇಕ ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ಎಸ್‌ಪಿ ಎಚ್.ಡಿ. ಆನಂದಕುಮಾರ ತಿಳಿಸಿದ್ದಾರೆ.

ವಿಜಯಪುರ ನಗರ ಹೊರವಲಯದ ಕೊಲ್ಹಾರ ರಸ್ತೆಯಲ್ಲಿರುವ ಢಾಬಾ ಬಳಿ ನ. 9 ರಂದು ಮಧ್ಯರಾತ್ರಿ ಶ್ರೀದೇವಿ ರಮೇಶ ತಳಕೇರಿ ಎಂಬ ಮಹಿಳೆಯ ಕೊಲೆಯಾಗಿತ್ತು. ಈ ಬಗ್ಗೆ ಜಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಕೊಲೆ ಮಾಡಿದ ವ್ಯಕ್ತಿ ಸ್ಥಳೀಯ ವಜ್ರಹನುಮಾನ ನಗರದ ನಿವಾಸಿ ಹಾಗೂ ಮೂಲತಃ ಇಂಡಿ ತಾಲೂಕಿನ ಹಿರೇಮಸಳಿಯ ಕಲ್ಲಪ್ಪ ಬಸಪ್ಪ ಊರ್ಫ್ ಬಸಣ್ಣ ಸಿಂದಗಿ ಎಂಬುವನಾಗಿದ್ದು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಸಿಂದಗಿಯಲ್ಲಿ ಮಹಿಳೆಗೆ ಬರ್ಬರವಾಗಿ ಕೊಲೆ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿಯೂ ಪೊಲೀಸರು ಯಶಸ್ವಿಯಾಗಿದ್ದಾರೆ. ಸುರೇಶ ಮಲ್ಲಪ್ಪ ನಾಯ್ಕೋಡಿ ಉರ್ಫ್ ತಳವಾರ ಬಂಧಿತ ಆರೋಪಿ. ಕಳೆದ ನ.27 ರಂದು ಶಾಂತಾಬಾಯಿ (50) ಅವರ ಕೊಲೆ ನಡೆದಿತ್ತು. ಅವರು ಕುರಿ ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಬಂಧಿತ ಆರೋಪಿಯು ಹರಿತವಾದ ಆಯುಧದ ಕುತ್ತಿಗೆ ಹಾಗೂ ತಲೆಗೆ ಪೆಟ್ಟು ನೀಡಿ ಕೊಲೆ ಮಾಡಿರುವುದು ತನಿಖೆ ವೇಳೆ ತಿಳಿದು ಬಂದಿದೆ ಎಂದು ಎಸ್‌ಪಿ ಆನಂದಕುಮಾರ ತಿಳಿಸಿದರು.

error: Content is protected !!