ಗಿಡ ಹತ್ತಲು ಜಾಗ ಬಿಡಿ ನಾನು ಸರ್ಕಾರಿ ಬಸ್.. ಪ್ರಯಾಣಿಕರು ಸೇಫ್.. ಏನಾಗಿದೆ ಗೊತ್ತಾ..?
ವಿಜಯಪುರ: ಬಸ್‌ನಲ್ಲಿ ಉಂಟಾದ ತಾಂತ್ರಿಕ ತೊಂದರೆಯಿಂದಾಗಿ ಅಪಘಾತ ತಪ್ಪಿಸಲು ಹೋಗಿ ಮನೆಯ ಮುಂದಿನ ಬೃಹತ್ ಗಿಡಕ್ಕೆ ಸರ್ಕಾರಿ ಬಸ್ ಡಿಕ್ಕಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಮುರಾಳ ಗ್ರಾಮದಲ್ಲಿ ನಡೆದಿದೆ. ಬಸ್‌ನಲ್ಲಿ ತಾಂತ್ರಿಕ ತೊಂದರೆ ಉಂಟಾಗಿರುವುದನ್ನ ಮನಗಂಡ ಚಾಲಕ ತನ್ನ ಸಮಯಪ್ರಜ್ಞೆಯ ಕಾರಣದಿಂದಾಗಿ ಸಂಭವಿಸಬಹುದಾಗಿದ್ದ ಭಾರೀ ಅಪಘಾತ ತಪ್ಪಿಸಿದ್ದಾನೆ. ಮುದ್ದೇಬಿಹಾಳದಿಂದ ನಾಲತವಾಡಕ್ಕೆ ಹೊರಟಿದ್ದ ಸರ್ಕಾರಿ ಬಸ್ ಅಪಘಾತ ಆಗಿದೆ. ಘಟನೆಯಲ್ಲಿ ಬಸ್‌ನಲ್ಲಿದ್ದ ಪ್ರಯಾಣಿಕರು ಸೇರಿದಂತೆ ಎಲ್ಲರೂ ಸುರಕ್ಷಿತವಾಗಿದ್ದಾರೆ. ಬಸ್ ನಿಯಂತ್ರಣ ತಪ್ಪಿ ಗ್ರಾಮದ ಕೆಲ ಮನೆಗಳತ್ತ ಧಾವಿಸುತ್ತಿದ್ದುದನ್ನ ಪ್ರತ್ಯಕ್ಷ ಕಂಡ ಕೆಲ ಗ್ರಾಮಸ್ಥರು ಸಹ ಸುರಕ್ಷಿತವಾಗಿ ಪಾರಾಗಿದ್ದಾರೆ. ಮುದ್ದೇಬಿಹಾಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.