ಎಟಿಎಂ ಉದ್ಯೋಗಿಗಳಿಂದ ನಂಬಿಕೆ ದ್ರೋಹ, ಎರಡು ಕೋಟಿ ರೂಪಾಯಿಯೊಂದಿಗೆ ಹೊಟೆಲ್‌ನಲ್ಲಿ ಸಿಕ್ಕ ಆರೋಪಿಗಳು !
ಸರಕಾರ್ ನ್ಯೂಸ್ ವಿಜಯಪುರ
ವಿವಿಧ ಬ್ಯಾಂಕ್‌ಗಳ ಎಟಿಎಂಗಳಿಗೆ ಹಣ ತುಂಬುವ ಕಂಪನಿಗೆ ಅದರ ಉದ್ಯೋಗಿಗಳೇ
ನಂಬಿಕೆ ದ್ರೋಹ ಎಸಗಿರುವ ಪ್ರಕರಣ ವಿಜಯಪುರದಲ್ಲಿ ಬೆಳಕಿಗೆ ಬಂದಿದೆ.
ಸಿಎಂಎಸ್ ಇನ್ಫೋಸಿಸ್ಟಮ್ ಲಿ. ಕಂಪನಿಯ ಉದ್ಯೋಗಿಗಳು 2 ಕೋಟಿ ರೂಪಾಯಿಗಳಿಗೂ ಅಧಿಕ ಹಣ ವಿಥ್ ಡ್ರಾ ಮಾಡಿಕೊಂಡು ಖಾಸಗಿ ಹೋಟೆಲ್‌ಗೆ ತೆರಳುತ್ತಿದ್ದ ಸಂದರ್ಭ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಆ ಕಂಪನಿಯ ಶಾಖಾ ವ್ಯವಸ್ಥಾಪಕ ಕೃಷ್ಣಾ ಆರ್ ನ.27ರಂದು ಗೋಳಗುಮ್ಮಟ ಠಾಣೆಗೆ ದೂರು ನೀಡಿದ್ದಾರೆ.
ಏನಿದು ಪ್ರಕರಣ?
ಸಿಎಂಎಸ್ ಇನ್ಫೋಸಿಸ್ಟಮ್ ಲಿ. ಕಂಪನಿಯುವ ವಿವಿಧ ಬ್ಯಾಂಕ್‌ಗಳ ಎಟಿಎಂಗಳಿಗೆ ಹಣ ತುಂಬುವ ಕೆಲಸ ನಿಭಾಯಿಸುತ್ತದೆ. ಇದರ ಆರು ಜನ ಉದ್ಯೋಗಿಗಳಾದ ಮಲ್ಲಿಕಾರ್ಜುನ ಪ್ರಭುಗೌಡ ಅನಂತರೆಡ್ಡಿ, ಮಹಾಂತೇಶ ನಿಂಗಪ್ಪ ನಾಗಾವಿ, ಕೃಷ್ ಅಮೋಘಸಿದ್ದ ಕ್ಷೀರಸಾಗರ, ಶಶಿಧರ ನಾನಾಸಾಹೇಬ ಕುಲಕರ್ಣಿ, ರವಿಕುಮಾರ ಸಿದ್ದಪ್ಪ ಪಾರಗೊಂಡ ಹಾಗೂ ಹಣಮಂತ ಗಿರಿಯಪ್ಪ ಭಜಂತ್ರಿ ಇವರು ಕಂಪನಿಯ ವಾಹನದ ಮುಖಾಂತರ ವಿವಿಧ ಬ್ಯಾಂಕ್‌ಗಳ ಎಟಿಎಂಗಳಿಗೆ ಹಣ ತುಂಬುವ ಕೆಲಸ ಮಾಡುತ್ತಿದ್ದರು.
ಈ ಆರು ಜನ ಸೇರಿ ನ. 25ರಂದು ಸ್ಟೇಟ್ ಬ್ಯಾಂಕ್ ಮುಖ್ಯ ಶಾಖೆಯಿಂದ 2.34 ಕೋಟಿ ರೂ. ಇಥಡ್ರಾ ಮಾಡಿಕೊಂಡು ಸಿಎಂಎಸ್ ಕಂಪನಿಗೆ ಸೇರಿದ ವಾಹನ (ರನಂ. ಕೆಎ-51, ಡಿ-3208) ದಲ್ಲಿ ಹಾಕಿಕೊಂಡು ಬಾಡಿಗೆ ರೂಮಿನ ಬಳಿ ತೆಗೆದು ಕೊಂಡು ಹೋಗಿದ್ದು ಅಲ್ಲಿಂದ ಟ್ರಂಕ್‌ನಲ್ಲಿ 2 ಕೋಟಿ ರೂ. ಹಣ ತೆಗೆದುಕೊಂಡು ಪಾರ್ಚೂನರ್ ಕಾರ್ (ರ.ನಂ. ಕೆಎ-54, ಎನ್-2244)ನಲ್ಲಿ ಹಾಕಿಕೊಂಡು ಅಥಣಿ ರಸ್ತೆಗೆ ಇರುವ ಹೋಟೆಲ್ ಪರ್ನ್ ರೆಸಿಡೆನ್ಸಿಗೆ ಹೋಗಿದ್ದಾರೆ. ಅಲ್ಲಿ ವಾಹನ ಪಾರ್ಕ್ ಮಾಡಿ ಹಣದೊಂದಿಗೆ ಹೊಟೆಲ್ ಒಳಗೆ ಹೋಗುವಾಗ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 2 ಕೋಟಿ ರೂ. ಜಫ್ತು ಮಾಡಿಕೊಂಡಿದ್ದಾರೆ. ಇನ್ನುಳಿದ 32 ಲಕ್ಷ ರೂಪಾಯಿ ಪೈಕಿ 28 ಲಕ್ಷ ರೂಪಾಯಿಯನ್ನು ಬಿಡಿಎ ಸೈಟ್ ಪ್ಲಾಟ್ 56ರಲ್ಲಿರುವ ಎಟಿಎಂಗೆ ಹಾಕಿ ಇನ್ನುಳಿದ 6 ಲಕ್ಷ ರೂಪಾಯಿಯನ್ನು ಅದೇ ಎಟಿಎಂದಲ್ಲಿನ ಕ್ಯಾಸೆಟ್‌ನಲ್ಲಿ ಇರಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಗೋಳಗುಮ್ಮಟ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್‌ಸ್ಕ್ರೈಬ್ ಮಾಡಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)