ಮಹಾತ್ಮರ ಮುಖಕ್ಕೆ ಮಣ್ಣು ಮೆತ್ತಿದ ಕಿಡಿಗೇಡಿಗಳು, ವಿಜಯಪುರದಲ್ಲೊಂದು ವಿಕೃತ ಘಟನೆ !
ವಿಜಯಪುರ: ದೇಶಭಕ್ತರು, ಮಹಾತ್ಮರು ಹಾಗೂ ಪರಿಸರ, ಪ್ರಾಣಿ, ಪಕ್ಷಿಗಳ ಚಿತ್ರಕ್ಕೆ ಮಣ್ಣು ಮೆತ್ತಿದ ಪ್ರಕರಣವೊಂದು ಭಾನುವಾರ ಬೆಳಕಿಗೆ ಬಂದಿದೆ.
ವಿಜಯಪುರದ ಮರಾಠಾ ಮಹಾವಿದ್ಯಾಲದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಮಹಾತ್ಮ ಗಾಂಧಿ, ಭಾರತ ರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ್, ಬಾಲಗಂಗಾಧರ ತಿಲಕ ಮತ್ತಿತರರ ಚಿತ್ರಗಳಿಗೆ ಹಸಿ ಮಣ್ಣು ಮೆತ್ತಲಾಗಿದೆ.
ಸುದ್ದಿ ತಿಳಿಯುತ್ತಿದಂತೆ ಹೋರಾಟಗಾರರು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಇನ್ನು ಮೂರ್ತಿಗಳಿಗೆ ಹಚ್ಚಿದ ಮಣ್ಣನ್ನು ಸ್ಥಳೀಯರು ಒರೆಸಿ ಸ್ವಚ್ಚಗೊಳಿಸಿದರು.