ವಿಜಯಪುರ

ಉಕ್ರೇನ್‌ನಿಂದ ತವರಿಗೆ ಮರಳಿದ ವಿದ್ಯಾರ್ಥಿ, ಆರತಿ ಬೆಳಗಿ ಬರಮಾಡಿಕೊಂಡ ಕುಟುಂಬಸ್ಥರು, ಬಾಗೇವಾಡಿಯ ಸಿದ್ಧು ಪೂಜಾರಿಗೆ ಆತ್ಮೀಯ ಸ್ವಾಗತ…..!

ವಿಜಯಪುರ: ಯುದ್ಧ ಪೀಡಿತ ಪ್ರದೇಶ ಯುಕ್ರೇನ್‌ನಿಂದ ಸುರಕ್ಷಿತವಾಗಿ ಆಗಮಿಸಿದ ವಿದ್ಯಾರ್ಥಿಗೆ ಪಾಲಕರು ಹಾಗೂ ಗ್ರಾಮಸ್ಥರು ಆತ್ಮೀಯತೆಯಿಂದ ಬರಮಾಡಿಕೊಂಡರು.
ಬಸವನಬಾಗೇವಾಡಿ ತಾಲೂಕಿನ ನರಸಲಗಿ ಗ್ರಾಮದ ವಿದ್ಯಾರ್ಥಿ
ಸಿದ್ದು ಪೂಜಾರಿ ಭಾನುವಾರ ಉಕ್ರೇನ್ ನಿಂದ ವಾಪಸ್ಸಾಗಿದ್ದಾರೆ. ಉಕ್ರೇನ್ ನ ಪಶ್ಚಿಮ ಭಾಗದಲ್ಲಿದ್ದ ವೈದ್ಯಕೀಯ ವಿದ್ಯಾರ್ಥಿ ಸಿದ್ದು ಪೂಜಾರಿ ಮನೆಗೆ ಬರುತ್ತಿದ್ದಂತೆ ಕುಟುಂಬಸ್ಥರು ಆರತಿ ಮಾಡಿ ಸಂತಸದರಿಂದ ಬರಮಾಡಿಕೊಂಡರು.
ಸದ್ಯ ಮನೆಯಲ್ಲಿ ಹಾಗೂ ಗ್ರಾಮದಲ್ಲಿಸಂತಸ ಮನೆ ಮಾಡಿದೆ. ಸಿದ್ದು ಪೂಜಾರಿ ಸುರಕ್ಷಿತವಾಗಿ ಬಂದಿದ್ದಕ್ಕೆ ಪೋಷಕರು ಖುಷಿಪಟ್ಟರು.
ಉಕ್ರೇನ್ ನಲ್ಲಿನ ತನ್ನ ಅನುಭವ ಬಿಚ್ಚಿಟ್ಟ ಸಿದ್ದು, “ಕಳೆದ ಫೆಬ್ರವರಿ 28 ರಂದು ಉಕ್ರೇನ್ ಬಿಟ್ಟು ರೊಮೇನಿಯಾ ದೇಶದ ಗಡಿ ತಲುಪಿದೆ. ಮೂರು ದಿನಗಳ ಕಾಲ ರೊಮೇನಿಯಾದಲ್ಲಿ ಉಳಿದುಕೊಂಡೆ.
ರೊಮೇನಿಯಾದಲ್ಲಿ ಭಾರತೀಯ ರಾಯಭಾರ ಕಚೇರಿ ಆಧಿಕಾರಿಗಳು ಸಹಾಯ ಮಾಡಿದರು
ಊಟ ವಸತಿಯ ವ್ಯವಸ್ಥೆ ಮಾಡಿದರು. ರೊಮೇನಿಯಾದಿಂದ ಮಾರ್ಚ್ 4 ರಂದು ದೆಹಲಿ ತಲುಪಿದೆ.
ನಂತರ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿ ಇಂದು ನಮ್ಮೂರಿಗೆ ಬಂದಿದ್ದೇನೆ. ಸುರಕ್ಷಿತವಾಗಿ ತವರೂರು ಸೇರಿದ್ದಕ್ಕೆ ಸಂತೋಷವಾಗಿದೆ ಎಂದರು.
ಇನ್ನು ರಷ್ಯಾ ದಾಳಿಗೆ ಬಲಿಯಾದ ಹಾವೇರಿಯ ನವೀನ್ ಸಾವಿಗೆ ವಿಷಾಧ ವ್ಯಕ್ತಪಡಿಸಿದ ಸಿದ್ದು
ಉಕ್ರೇನ್ ನಲ್ಲಿ ಸಿಲುಕಿರೋ ಭಾರತೀಯರನ್ನು ಸುರಕ್ಷಿತವಾಗಿ ಕರೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಯ ಶ್ಲಾಘನೀಯ ಎಂದರು.
ಬಸವನಬಾಗೇವಾಡಿ ತಹಸೀಲ್ದಾರ ವಿಜಯಕುಮಾರ್ ಕಡಕೋಳ ಸಿದ್ದು ಮನೆಗೆ ಭೇಟಿ ನೀಡಿದರು.

error: Content is protected !!