ರಾಜ್ಯ

ಗೊಲ್ಲ-ಕಾಡುಗೊಲ್ಲ ಸಮುದಾಯಕ್ಕೆ ಸಿಗುವುದೇ ಎಸ್‌ಟಿ ಸ್ಥಾನಮಾನ? ಇಲ್ಲಿದೆ ನೋಡಿ ಸರ್ಕಾರದ ಪ್ರತಿಕ್ರಿಯೆ…..

ಬೆಂಗಳೂರು: ರಾಜ್ಯದಲ್ಲಿ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ಗೊಲ್ಲ ಮತ್ತು ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟಪಂಗಡಕ್ಕೆ ಸೇರ್ಪಡೆಗೊಳಿಸುವ ಪ್ರಸ್ತಾವನೆ ಯಾವ ಹಂತದಲ್ಲಿದೆ? ಸರ್ಕಾರ ಕೈಗೊಂಡ ಕ್ರಮಗಳೇನು? ಎಂಬುದುರ ಮಾಹಿತಿ ಇಲ್ಲಿದೆ ನೋಡಿ…..
ಕಾಡುಗೊಲ್ಲ (ಅಡವಿಗೊಲ್ಲ) ಮತ್ತು ಅದರ ಸಮನಾಂತರ ಪದಗಳಾದ ಹಟ್ಟಿ ಗೊಲ್ಲ, ಅಡವಿ ಗೊಲ್ಲ ಸಮುದಾಯಗಳನ್ನು ಕರ್ನಾಟಕ ರಾಜ್ಯದ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು 2014ರಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ಆದರೆ, ಕೇಂದ್ರ ಸರ್ಕಾರದ ರಿಜಿಸ್ಟಾರ್‌ ಜನರಲ್‌ ಆಫ್‌ ಇಂಡಿಯಾ (ಜನಗಣತಿ), ನವದೆಹಲಿ ಇವರು ಕೆಲವು ಅಂಶಗಳಿಗೆ ವಿವರವಾದ ಸಮರ್ಥನೆ/ ಅಭಿಪ್ರಾಯ ನೀಡುವಂತೆ ಕೋರಿದ್ದು,ಆ ಬಗ್ಗೆ ಈಗಾಗಲೇ ಸಮರ್ಥನೆ ಮತ್ತು ಅಭಿಪ್ರಾಯವನ್ನು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಫೆ. 2, 2022ರಲ್ಲಿ ಸಲ್ಲಿಸಲಾಗಿದೆ. ಸದರಿ ವಿಷಯ ಕೇಂದ್ರ ಸರ್ಕಾರದಲ್ಲಿ ಬಾಕಿ ಇದೆ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.
ಅಲ್ಲದೇ ಈ ಪ್ರಕರಣ ಭಾರತ ಸರ್ಕಾರದಲ್ಲಿ ಬಾಕಿ ಇರುವುದರಿಂದ ಮೂಲ ಸೌಕರ್ಯ ಕಲ್ಪಿಸುವ ವಿಷಯ ಪ್ರಸ್ತುತ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದ್ದಾಗಿಲ್ಲ ಎಂದು ಅಧಿವೇಶನದಲ್ಲಿ ತಿಳಿಸಿದ್ದಾರೆ .

error: Content is protected !!