ಶ್ರೀಗಂಧ ಬೆಳೆಯಲು ಸರ್ಕಾರದ ಅನುಮತಿ ಬೇಕೆ? ಸರ್ಕಾರ ನೀಡುತ್ತಿರುವ ಪ್ರೋತ್ಸಾಹಗಳೇನು? ಇಲ್ಲಿದೆ ನೋಡಿ ಸಮಗ್ರ ಮಾಹಿತಿ…
ಬೆಂಗಳೂರು: ರಾಜ್ಯದಲ್ಲಿ ಈಚೆಗೆ ಶ್ರೀಗಂಧ ಬೆಳೆಯುವ ರೈತರ ಸಂಖ್ಯೆ ಹೆಚ್ಚಾಗಿದೆ. ಹಚ್ಚಿನ ಆದಾಯ ತರುವ ಶ್ರೀಗಂಧ ಬೆಳೆಯಲು ಸರ್ಕಾರದ ಅನುಮತಿ ಬೇಕೆ? ಸರ್ಕಾರ ನೀಡುವ ಪ್ರೋತ್ಸಾಹಗಳೇನು? ಸಹಾಯ ಧನವಿದೆಯಾ? ಮಾರ್ಗಸೂಚಿಗಳೇನು? ಎಂಬುದರ ವಿವರ ಇಲ್ಲಿದೆ ನೋಡಿ…..
ವಾಸ್ತವದಲ್ಲಿ ರೈತರು ತಮ್ಮ ಖಾಸಗಿ ಜಮೀನಿನಲ್ಲಿ ಶ್ರೀಗಂಧ ಬೆಳೆಯಲು ಸರ್ಕಾರದ ಅನುಮತಿ ಬೇಕಿಲ್ಲ. ಅರಣ್ಯ ಇಲಾಖೆಯ ಸಸ್ಯ ಕ್ಷೇತ್ರದಲ್ಲಿ ಬೆಳೆಸಿರುವ ಶ್ರೀಗಂಧದ ಸಸಿಗಳನ್ನು ರೈತರಿಗೆ ನಿಯಮಾನುಸಾರ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ.
ಅಲ್ಲದೇ, ಅರಣ್ಯ ಇಲಾಖೆಯ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ನೋಂದಾಯಿತ ರೈತರಿಗೆ ಬದುಕುಳಿದ ಪ್ರತಿ ಸಸಿಗೆ ಮೂರು ವರ್ಷದಲ್ಲಿ ಮೂರು ಹಂತದಲ್ಲಿ ಒಟ್ಟು 125 ರೂಗಳಂತೆ (ಮೊದಲನೇ ವರ್ಷದ ಅಂತ್ಯದಲ್ಲಿ 35 ರೂ., ಎರಡನೇ ವರ್ಷದ ಅಂತ್ಯದಲ್ಲಿ 40 ರೂ. ಮತ್ತು ಮೂರನೇ ವರ್ಷದ ಅಂತ್ಯದಲ್ಲಿ 50 ರೂ.) ಪ್ರೋತ್ಸಾಹ ಧನವನ್ನು ನಿಯಮಾನುಸಾರ ನೀಡಲಾಗುತ್ತದೆ.
ಮಾರ್ಗಸೂಚಿಗಳೇನು?
ಸರ್ಕಾರದ ಅಧಿಸೂಚನೆ ಸಂಖ್ಯೆ ಎಫ್ ಇಇ 16, ಎಫ್ ಎಸ್ ಡಬ್ಲೂ 2001, ದಿನಾಂಕ 5/09/2002ರ ತಿದ್ದುಪಡಿಯಂತೆ ಕರ್ನಾಟಕ ಅರಣ್ಯ ನಿಯಮಾವಳಿ, 1969ರ ನಿಯಮ 108 (5), 106 (6)ರನ್ವಯ ರೈತರು ಬೆಳೆದ ಶ್ರೀಗಂಧದ ಮರಗಳನ್ನು ಮೈಸೂರು, ಶಿವಮೊಗ್ಗ ಮತ್ತು ಧಾರವಾಡ ಸರ್ಕಾರಿ ಶ್ರೀಗಂಧದ ಕೋಠಿಗಳಿಗೆ ಮಾರಾಟ ಮಾಡಬಹುದಾಗಿದೆ.
ಇದಲ್ಲದೇ ಸರ್ಕಾರದ ಅಧಿಸೂಚನೆ ಸಂಖ್ಯೆ ಎಫ್ ಇಇ 31, ಎಫ್ ಎಸ್ ಡಬ್ಲೂ 2008, ದಿನಾಂಕ 11/07/2008 ರಂತೆ ರೈತರು ಬೆಳೆದ ಶ್ರೀಗಂಧದ ಮರಗಳನ್ನು ಕನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತ ಮತ್ತು ಕರ್ನಾಟಕ ಸಾಬೂನು ಮತ್ತುಮಾರ್ಜಕ ನಿಯಮಿತ ಇಲ್ಲಿಗೂ ಮಾರಾಟ ಮಾಡಹುದಾಗಿದೆ.
ಸಸಿಗಳ ಪೂರೈಕೆ:
ರೈತರಿಗೆ ಉತ್ತಮ ಗುಣಮಟ್ಟದ ಸಸಿಗಳನ್ನು ಪೂರೈಸಲು ಅರಣ್ಯ ಇಲಾಖೆಯಲ್ಲಿ ಅನೇಕ ಕ್ರಮ ಕೈಗೊಳ್ಳಲಾಗಿದೆ
ರಾಜ್ಯದಲ್ಲಿ ಸಮತೋಲನ ಹವಾಮಾನವುಳ್ಳ ವಿವಿಧ ವರ್ಷಗಳಿಂದ ಸಮೃದ್ಧವಾಗಿ ಬೆಳೆದ ಮಧ್ಯ ವಯಸ್ಕ ಮಾತೃ ವೃಕ್ಷಗಳಿಂದ ಉತ್ತಮ ಗುಣಮಟ್ಟದ ಬೀಜಗಳನ್ನು ಶೇಕರಿಸಿ ವಿವಿಧ ವಿಭಾಗಗಳಿಗೆವಿತರಿಸಲಾಗುತ್ತಿದೆ.
ನಂತರ ಇದರಲ್ಲಿ ಅತ್ಯುತ್ತಮವಾದ ಬೀಜಗಳನ್ನು ಪರೀಕ್ಷೆಗೆ ಒಳಪಡಿಸಿದ ನಂತರ ಬೀಜೋಪಚಾರ ಮಾಡಿ ಬೀಜಗಳನ್ನು ಸಸ್ಯ ಕ್ಷೇತ್ರಗಳಲ್ಲಿನಮಡಿಗಳಲ್ಲಿ ವೈಜ್ಞಾನಿಕವಾಗಿ ಬಿತ್ತನೆ ಮಾಡಲಾಗುತ್ತದೆ. ಮೊಳಕೆ ಬಂದ ನಂತರ ಮತ್ತೊಮ್ಮೆ ಪರಿಶೀಲಿಸಿ ಅದರಲ್ಲಿ ಅತ್ಯುತ್ತಮವಾಗಿ ಬೆಳೆದಂತ ಸಸಿಗಳನ್ನು ಆಯ್ಕೆ ಮಾಡಿ ರೈತರಿಗೆ ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಅಲ್ಲದೇ ಸಸಿಗಳ ಉತ್ತಮ ಗುಣಮಟ್ಟವನ್ನು ಕಾಪಾಡಲು ಗೊಬ್ಬರವನ್ನು ಹಾಕಲಾಗುತ್ತದೆ ಹಾಗೂ ಸಸ್ಯಗಳಿಗ ಕ್ರಿಮಿ ಕೀಟಗಳ ಬಾಧೆಯನ್ನು ತಪ್ಪಿಸುವ ಸಲುವಾಗಿ ಕೀಟನಾಶಕಗಳನ್ನು ಅವಶ್ಯವಿದ್ದಲ್ಲಿ ಸೀಂಪಡಿಸಲಾಗುವುದು.
ಶ್ರೀಗಂಧದ ಪ್ರಜಾತಿಗಳಲ್ಲಿ ಮರಯೂರು ತಳಿ, ಮಸೂರು ತಳಿ, ಮಾತೃ ವೃಕ್ಷಗಳಿಂದ ಶೇಖರಿಸಿದ ತಳಿಗಳು ಮುಖ್ಯ ತಳಿಗಳಾಗಿವೆ.
ಅಂದಹಾಗೆ ಮತ್ತೇಕೆ ತಡ ಶ್ರೀಗಂಧ ಬೆಳೆಯಲು ಇಚ್ಛೆ ಹೊಂದಿದರ ರೈತರು ಈ ಮಾಹಿತಿ ಹಂಚಿಕೊಂಡು ಹೆಚ್ಚು ಹೆಚ್ಚು ಶ್ರೀಗಂಧ ಬೆಳೆಯಲು ಮುಂದಾಗಿ ಮತ್ತು ಇತರರನ್ನು ಪ್ರೋತ್ಸಾಹಿಸಿ.