ಬಸ್ – ಲಾರಿ ಮುಖಾಮುಖಿ ಡಿಕ್ಕಿ, ಇಬ್ಬರ ಸಾವು, 24 ಜನ ಗಾಯ
ಸರಕಾರ್ ನ್ಯೂಸ್ ತಿಕೋಟಾ
ಕೆಎಸ್ ಆರ್ ಟಿಸಿ ಬಸ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಲಾರಿ ಚಾಲಕ ಹಾಗಾ ಬಸ್ ನಲ್ಲಿದ್ದ ಓರ್ವ ವಿದ್ಯಾರ್ಥಿನಿ ಸಾವಿಗೀಡಾಗಿದ್ದಾರೆ.
ತಿಕೋಟಾ ತಾಲೂಕಿನ ಬಾಬಾನಗರ ಬಳಿ ಗುರುವಾರ ಈ ಅಪಘಾತ ಸಂಭವಿಸಿದೆ.
ಲಾರಿ ಚಾಲಕ ತಮಿಳುನಾಡು ಮೂಲದ ಬಾಬು ವೆಂಕಟೇಶ ಸ್ಥಳದಲ್ಲಿಯೇ ಸಾವಿಗೀಡಾಗಿದ್ದು,
ಶ್ರದ್ಧಾ ಶಿವಾನಂದ ಬಡಿಗೇರ (18 ) ಚಿಕಿತ್ಸೆ ಫಲಿಸದೆ ಜಿಲ್ಲಾಸ್ಪತ್ರೆಯಲ್ಲಿ ಅಸುನೀಗಿದ್ದಾಳೆ.
ಇತರೆ 24 ಜನ ಪ್ರಯಾಣಿಕರು ಗಾಯಗೊಂಡಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಜತ್ತ್ ನಿಂದ ವಿಜಯಪುರಕ್ಕೆ ಹೊರಟಿದ್ದ ಲಾರಿ
(ಟಿಎನ್ 52 ಹೆಚ್ 6877) ಎದುರಿನಿಂದ ಬಂದ ಬಸ್ ( ಕೆಎ 28 ಎಫ್ 2015) ಗೆ ರಭಸವಾಗಿ ಡಿಕ್ಕಿ ಹೊಡೆದಿದೆ.
ಆಂಬುಲೆನ್ಸ್ ತಡವಾಗಿ ಬಂದಿದ್ದರಿಂದ ಶೃದ್ಧಾ ಸಾವಿಗೀಡಾಗಿದ್ದಾಳೆ ಎಂಬುದು ಸ್ಥಳೀಯರ ಆರೋಪ.