ಎಸ್ ಸಿ- ಎಸ್ ಟಿ ಮೀಸಲು ಹೆಚ್ಚಳ, ತಳವಾರ ಸಮಾಜಕ್ಕಿಲ್ಲ ಪ್ರಮಾಣ ಪತ್ರ, ಚುನಾವಣೆ ಗಿಮಿಕ್ ಅಲ್ಲದೆ ಮತ್ತೇನು?
ಸರಕಾರ್ ನ್ಯೂಸ್ ವಿಜಯಪುರ
ರಾಜ್ಯ ಸರ್ಕಾರ ಘೋಷಿಸಿರುವ ಎಸ್ ಸಿ- ಎಸ್ ಟಿ ಮೀಸಲಾತಿಗೆ ಇನ್ನೂ ಸಂಸತ್ತಿನಲ್ಲಿ ಅನುಮೋದನೆಯಾಗಿ ರಾಷ್ಟ್ರಪತಿ ಅಂಕಿತ ಬೀಳಬೇಕು. ಆಗಲೇ ಬಿಜೆಪಿ ಸಂಭ್ರಮಾಚರಿಸಿತ್ತಿದೆ. ಆದರೆ ರಾಷ್ಟ್ರಪತಿ ಅಂಕಿತದೊಂದಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದರೂ ಈವರೆಗೂ ಜಾತಿ ಪ್ರಮಾಣ ಪತ್ರ ಹಂಚಿಕೆಯಾಗದಿರುವುದು ಚುನಾವಣೆ ಗಿಮಿಲ್ ಅಲ್ಲದೆ ಮತ್ತೇನು?
ಹೀಗೊಂದು ಪ್ರಶ್ನೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಪ್ರತಿಕ್ರಿಯೆ ನೀಡಿದ್ದು ಹೇಗ ಗೊತ್ತಾ?
ತಳವಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವುದರ ಜೊತೆಗೆ ಎಸ್ ಸಿ ಮತ್ತು ಎಸ್ ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಿರುವುದು ಕಾಂಗ್ರೆಸ್ ನಾಯಕರಿಗೆ ಸಹಿಸಲಾಗುತ್ತಿಲ್ಲ. ಶೀಘ್ರದಲ್ಲಿಯೇ ಎಲ್ಲ ಗೊಂದಲಗಳು ಬಗೆ ಹರಿಯಲಿವೆ ಎಂದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಬಹುದಿನದ ಬೇಡಿಕೆಯನ್ನು ಈಡೇರಿಸುವ ಮೂಲಕ ಬಿಜೆಪಿ ಸಾಮಾಜಿಕ ನ್ಯಾಯದ ಪರ ಇದೆ ಎಂಬುದನ್ನು ಸಾಬೀತು ಪಡಿಸಿದೆ. ಇದರಿಂದ ಕಾಂಗ್ರೆಸ್ ಹತಾಶಗೊಂಡಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ರಾಜ್ಯ ಸರ್ಕಾರ ಎಸ್ ಸಿ- ಎಸ್ ಟಿ ಮೀಸಲು ಹೆಚ್ಚಳ ಮಾಡಿರುವುದನ್ನು ಸ್ವಾಗತಿಸುತ್ತಲೇ ಇನ್ನೊಂದೆಡೆ ಅಸಹನೀಯ ಹೇಳಿಕೆ ನೀಡುತ್ತಿದ್ದಾರೆ. ಇನ್ನೂ ಸಂಸತ್ತಿನಲ್ಲಿ ಅನುಮೋದನೆಯಾಗಿ ರಾಷ್ಟ್ರ ಪತಿ ಅಂಕಿತ ಬೀಳಬೇಕೆಂಬ ಹತಾಶದ ಹೇಳಿಕೆ ನೀಡುತ್ತಿದ್ದಾರೆ. ಆದರೆ ಕಾಂಗ್ರೆಸ್ ನಾಯಕರಿಗೆ ಹೇಳುವುದಿಷ್ಟೇ….ರಾಜ್ಯ ಮತ್ತು ಕೇಂದ್ರದಲ್ಲಿ ಬಹುಮತ ಪಡೆದ ಬಿಜೆಪಿ ಪಕ್ಷವೇ ಅಧಿಕಾರದಲ್ಲಿದ್ದು ಸುಲಭವಾಗಿ ಅನುಮೋದನೆ ಸಿಗಲಿದೆ. ಆ ಬಗ್ಗೆ ಆತಂಕ ಬೇಡ ಎಂದರು.
ಇನ್ನು ತಳವಾರ ಸಮುದಾಯವನ್ನು ಎಸ್ ಟಿಗೆ ಸೇರ್ಪಡೆಗೊಳಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿ ವರ್ಷ ಕಳೆದರೂ ಈವರೆಗೂ ಜಾತಿ ಪ್ರಮಾಣ ಪತ್ರ ಸಿಗುತ್ತಿಲ್ಲ. ಇಂಥದರಲ್ಲಿ ಇನ್ನೂ ರಾಷ್ಟ್ರಪತಿ ಅಂಕಿತವೇ ಬೀಳದ ಎಸ್ ಸಿ- ಎಸ್ ಟಿ ಮೀಸಲು ಹೆಚ್ಚಳ ವಿಷಯ ಚುನಾವಣೆ ಗಿಮಿಕ್ ಎನ್ನಿಸುವುದಿಲ್ಲವೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ದ ಕೂಚಬಾಳ, ಈಗಾಗಲೇ ಆ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ. ಶೀಘ್ರದಲ್ಲೇ ಆ ಗೊಂದಲ ಬಗೆ ಹರಿಯಲಿದೆ ಎಂದರು.
ಇನ್ನು ಬೇಡ ಜಂಗಮ ಸಮಾಜದ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಪಂಚಮಸಾಲಿ ಸಮಾಜ, ಕುರುಬ ಸಮಾಜ ಸೇರಿದಂತೆ ಹಲವು ಸಮಾಜಗಳು ಮೀಸಲಾತಿಗಾಗಿ ಹೋರಾಡುತ್ತಿದ್ದು ಆ ಬಗ್ಗೆ ಪಕ್ಷ ಇನ್ನೂ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದೇ ಇರುವ ಬಗ್ಗೆ ಪ್ರತಿಕ್ರಿಯಿಸಿದ ಕೂಚಬಾಳ, ಎಲ್ಲ ತಾಂತ್ರಿಕ ತೊಂದರೆಗಳನ್ನು ಬಗೆ ಹರಿಸಿ ಶೀಘ್ರದಲ್ಲಿಯೇ ಸರ್ಕಾರದ ಅದಕ್ಕೊಂದು ಸ್ಪಷ್ಟ ನಿರ್ಧಾರ ಕೈಗೊಳ್ಳಲಿದೆ ಎಂದರು.
ಬೆಳಗಾವಿ ವಿಭಾಗದ ಪ್ರಭಾರಿ ಚಂದ್ರಶೇಖರ ಕವಟಗಿ, ರಾಜ್ಯ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಡಬ್ಬಿ,
ಮುಖಂಡರಾದ ಸುರೇಶ ಬಿರಾದಾರ ಶಿವರುದ್ರ ಬಾಗಲಕೋಟ, ಬಸವರಾಜ ಬಿರಾದಾರ, ಮಲ್ಲಿಕಾರ್ಜುನ ಜೋಗೂರ, ಮಳುಗೌಡ ಪಾಟೀಲ, ವಿಜಯ ಜೋಷಿ ಮತ್ತಿತರರಿದ್ದರು.