ಬಸ್‌ನ ಮೇನ್ ಫಾಟಕ್ ಕಟ್, ಬೇವಿನ ಮರಕ್ಕೆ ಡಿಕ್ಕಿ, ಬಾವಿಗೆ ಬೀಳುತ್ತಿದ್ದ ಬಸ್ ಜಸ್ಟ್ ಮಿಸ್
ಸರಕಾರ್ ನ್ಯೂಸ್ ವಿಜಯಪುರ
ಬಸ್‌ನ ಮೇನ್ ಫಾಟಕ್ ಕಟ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಬೇವಿನ ಮರಕ್ಕೆ ಡಿಕ್ಕಿ ಹೊಡೆದಿದ್ದು 70ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ !
ನಾಗಠಾಣ ಮತ್ತು ಅಲಿಯಾಬಾದ್ ಮಧ್ಯೆ ಗುರುವಾರ ಈ ಘಟನೆ ನಡೆದಿದೆ. ಇಂಡಿಯಿಂದ ವಿಜಯಪುರಕ್ಕೆ ಹೊರಟಿದ್ದ ಇಂಡಿ ಡಿಪೋದ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಆಳ ತಗ್ಗಿನಲ್ಲಿರುವ ಬೇವಿನ ಮರಕ್ಕೆ ಡಿಕ್ಕಿ ಹೊಡೆದಿದೆ. ಮರದ ಮುಂದೆಯೇ ಆಳವಾದ ಬಾವಿ ಇದೆ. ಮರ ಇರದೇ ಹೋಗಿದ್ದರೆ ಬಸ್ ನೇರವಾಗಿ ಬಾವಿಗೆ ಬೀಳುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮೇನ್ ಫಾಟಕ್ ಕಟ್ ಆಗಿದ್ದು ಚಾಲಕ ಎಷ್ಟೇ ನಿಯಂತ್ರಿಸಲು ಮುಂದಾದರೂ ಬಸ್ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಆಳವಾದ ತಗ್ಗಿಗೆ ಬಸ್ ಜಾರಿದೆ. ಬಸ್‌ನಲ್ಲಿದ್ದ 70ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದು ಕೂಡಲೇ ಆಂಬುಲೆನ್ಸ್ ಮೂಲಕ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಪ್ರಯಾಣಿಕರು ತಿಳಿಸಿದ್ದಾರೆ.