ತೊರವಿ ತಾಂಡಾದಲ್ಲೊಂದು ಧಾರುಣ ಘಟನೆ, ಮೂರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ತಾಯಿ ಆತ್ಮಹತ್ಯೆ !
ಸರಕಾರ್ ನ್ಯೂಸ್ ವಿಜಯಪುರ
ಜಿಲ್ಲೆಯ ತಿಕೋಟಾ ತಾಲೂಕಿನ ತೊರವಿ ತಾಂಡಾ-1 ರ ತೋಟದ ವಸತಿಯೊಂದರಲ್ಲಿ ಬುಧವಾರ ತಾಯಿಯೊಬ್ಬಳು ತನ್ನ ಮೂರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಅನಿತಾ ಪಿಂಟು ಜಾಧವ್ (27) ತನ್ನ ಮಕ್ಕಳಾದ ಪ್ರವೀಣ (6), ಸುದೀಪ (4), ಮಮದಿಕಾ (2) ಎಂಬ ಮೂರು ಮಕ್ಕಳನ್ನು ಕೃಷಿ ಹೊಂಡದಲ್ಲಿ ಎಸೆದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತ ಕಳೆಬರ ಹೊರತೆಗೆದು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆ ಮುಂದುವರಿದಿದೆ.