ಕ್ರಿಪ್ಟೊ ಮೈನಿಂಗ್ ಹಣ ಹೂಡಿಕೆ ಪ್ರಕರಣ, ನೈಜೇರಿಯಾ ಮೂಲದ ಮತ್ತೆ ಮೂವರ ಬಂಧನ, ಹೇಗಿದ್ದಾರೆ ಗೊತ್ತಾ ವಂಚಿತ ಆರೋಪಿಗಳು?
ಸರಕಾರ ನ್ಯೂಸ್ ವಿಜಯಪುರ
ಕ್ರಿಪ್ಟೊ ಮೈನಿಂಗ್ ಮಾಡಲು ಹಣ ಹೂಡಿಕೆ ಮಾಡಿದರೆ ಹೂಡಿದ ಹಣಕ್ಕೆ ಪ್ರತಿಶತಃ 200ರಷ್ಟು ಲಾಭಾಂಶ ನೀಡುವುದಾಗಿ ಯುದ್ಯಮಿಯೊಬ್ಬರನ್ನು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದಾರೆ.
ಉದ್ಯಮಿ ವಿಶಾಲಕುಮಾರ ಜೈನ್ ಎಂಬುವರನ್ನು ವಂಚಿಸಿ 59,12,765 ರೂಪಾಯಿ ಪಡೆದಿದ್ದ ಪ್ರಕರಣದಡಿ ಈಗಾಗಲೇ ಐವರನ್ನು ಬಂಧಿಸಲಾಗಿದ್ದು, ಇದೀಗ ಮತ್ತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ.
ವಿಜಯಪುರದ ಬಟ್ಟೆ ವ್ಯಾಪಾರಿಗೆ ವಂಚನೆ, ಅರ್ಧಕೋಟಿಗೂ ಅಧಿಕ ಹಣ ಕಳೆದುಕೊಂಡ ಮಾಲೀಕ….ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ…
ನೈಜೇರಿಯಾದ ಒಸೆಮುದಿಯಾಮೆನ್ ಊರ್ಫ್ ಪೀಟರ್ ಇದೇಮುಸಿಯನ್ (38), ಎಮೆಕಾ ಊರ್ಫ್ ಹ್ಯಾಪಿ ನ್ವಾವೊಲಿಸಾ (40) ಹಾಗೂ ಒಬಿನ್ನಾ ಸ್ಟಾನ್ಲಿ ಇಹೆಕ್ವೇರೆನ್ (42) ಬಂಧಿತ ಆರೋಪಿಗಳು. ಬೆಂಗಳೂರಿನಲ್ಲಿಯೇ ಇವರನ್ನು ವಶಕ್ಕೆ ಪಡೆಯಲಾಗಿದ್ದು, ಇವರಿಂದ ವಿವಿಧ ಕಂಪನಿಯ 21 ಮೊಬೈಲ್‌ಗಳು, 18 ಸಿಮ್ ಕಾರ್ಡ್, 1 ಲ್ಯಾಪ್‌ಟಾಪ್, 2 ಪೆನ್ ಡ್ರೈವ್, 1 ಡೊಂಗಲ್, 2ಎಟಿಎಂ ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಬ್ಯಾಂಕ್ ಖಾತೆಗಳನ್ನು ಡೆಬಿಟ್ ಪ್ರೀಜ್ ಮಾಡಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್‌ಪಿ ಋಷಿಕೇಶ ಸೋನಾವನೆ ತಿಳಿಸಿದ್ದಾರೆ.
ಪ್ರಕರಣದಡಿ ಇನ್ನೂ ಹಲವರು ಇರುವ ಶಂಖ್ಯೆ ಇದ್ದು ಎಸ್‌ಪಿ ಋಷಿಕೇಶ ಸೋನಾವನೆ ಹಾಗೂ ಎಎಸ್‌ಪಿ ಶಂಕರ ಮಾರಿಹಾಳ ಮಾರ್ಗದರ್ಶನದಲ್ಲಿ ಸಿಪಿಐ ರಮೇಶ ಅವಜಿ ನೇತೃತ್ವದ ತಂಡ ವ್ಯಾಪಕ ಜಾಲ ಬೀಸಿದೆ. ಅಗೆದಷ್ಟು ಆಳ ಎಂಬಂತೆ ಆರೋಪಿಗಳು ಪತ್ತೆಯಾಗುತ್ತಲೇ ಇದ್ದು ತಂಡ ಚುರುಕಿನ ಕಾರ್ಯಾಚರಣೆಗಿಳಿದಿದೆ.
ಪಿಎಸ್ಐ ಮಲ್ಲಿಕಾರ್ಜುನ ತಳವಾರ, ಪಿಎಸ್ಐ ಪಿ.ವೈ. ಅಂಬಿಗೇರ, ಸಿಬ್ಬಂದಿಯಾದ ಸಿದ್ದು ದಾನಪ್ಪಗೋಳ, ಪುಂಡಲೀಕ ಎಸ್.ಬಿರಾದಾರ, ದುಂಡು ಆರ್. ಪಾಟೀಲ, ಮಹಾಂತೇಶ ಬಿ. ಪಾಟೀಲ, ಎಸ್.ಆರ್. ಉಮನಾಬಾದಿ, ಎಂ.ಕೆ. ಹಾವಡಿ, ಎಂ.ಎಂ. ಕುರುವಿನಶೆಟ್ಟಿ, ಎ.ಎಲ್. ದೊಡಮನಿ, ಆರ್.ವಿ. ನಾಯಕ್, ಆರ್.ಬಿ. ಕೋಳಿ, ಡಿ.ಎಸ್. ಗಾಯಕವಾಡ, ಕುಮಾರ ರಾಠೋಡ, ಎ.ಆರ್. ಗದ್ಯಾಳ, ಎಸ್.ಆರ್. ಬಡಚಿ, ಎಂ.ಎಚ್. ಇಚ್ಚೂರ, ಎಸ್.ಐ. ಹೆಬ್ಬಾಳಟ್ಟಿ, ಎ.ಎಚ್. ಪಾಟೀಲ ಇದ್ದಾರೆ.