ಸಿಡಿಲು ಬಡಿದು 20 ಕುರಿಯೊಂದಿಗೆ ವ್ಯಕ್ತಿ ಸಾವು, ಅಯ್ಯಯ್ಯೋ ಎಲ್ಲಿ? ಹೇಗಾಯಿತು ಗೊತ್ತಾ?
ಸರಕಾರ ನ್ಯೂಸ್ ಬಬಲೇಶ್ವರ
ಮುಂಗಾರು ಪೂರ್ವ ಮಳೆ ದಿನೇ ದಿನೇ ಜೋರಾಗುತ್ತಿದ್ದು, ದಿನಕ್ಕೊಂದು ಅವಘಡ ಸಂಭವಿಸುತ್ತಿವೆ.
ಬುಧವಾರ ಜಿಲ್ಲೆಯಾದ್ಯಂತ ಮಳೆ ಸುರಿದಿದೆ. ಪರಿಣಾಮ ಸಿಡಿಲು ಬಡಿದು ಕುರಿ ಮತ್ತು ಕುರಿಗಾಹಿ ಅಸುನೀಗಿರುವ ಘಟನೆ ನಡೆದಿದೆ.
ಬಬಲೇಶ್ವರ್ ತಾಲೂಕಿನ ಕಾಖಂಡಕಿ ಗ್ರಾಮದ ಜಮೀನೊಂದರಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಅಮೋಘ ಸೋಮನಿಂಗ ಶಿವಣಗಿ( 38) ಹಾಗೂ ಅವರ 20 ಆಡುಗಳು ಮೃತಪಟ್ಟಿವೆ.
ಕುರಿ ಕಾಯುತ್ತಾ ಜಮೀನಿಗೆ ತೆರಳಿದ್ದ ಸಂದರ್ಭ ಮಳೆಯ ಆರ್ಭಟ ಜೋರಾಗಿದೆ. ಮರದ ಕೆಳಗಡೆ ಆಡುಗಳೊಂದಿಗೆ ನಿಂತಿರಬೇಕಾದರೆ ಏಕಾಏಕಿ ಸಿಡಿಲು ಬಡಿದಿದೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)