ಅಲ್ಪಸಂಖ್ಯಾತ ನಿಗಮದಿಂದ ವಿದ್ಯಾಭ್ಯಾಸಕ್ಕೆ ಸಾಲ ಸೌಲಭ್ಯ; ಆನ್‍ಲೈನ್ ಅರ್ಜಿ ಆಹ್ವಾನ
ಸರಕಾರ ನ್ಯೂಸ್ ವಿಜಯಪುರ
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ ಪ್ರಸಕ್ತ 2023-24ನೇ ಸಾಲಿಗೆ ಅರಿವು (ರಿನ್ಯೂವಲ್) ಸಾಲ ಯೋಜನೆಯಡಿಯಲ್ಲಿ ವಿದ್ಯಾಭ್ಯಾಸ ಸಾಲಕ್ಕಾಗಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಡಿ ಅಲ್ಪ ಸಂಖ್ಯಾತ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿಇಟಿ, ಡಿಸಿಇಟಿ, ಪಿಜಿ.ಸಿಇಟಿ, ನೀಟ್, ಪದವಿ ಮತ್ತು ಸ್ವಾತಕೋತ್ತರ ಕೋರ್ಸಗಳಾದ ವೈದ್ಯಕೀಯ ಎಂ.ಬಿ.ಬಿ.ಎಸ್., ಎಚಿಡಿ.,ಎಂಎಸ್., ಬಿ.ಡಿ.ಎಸ್., ದಂತ ವೈದ್ಯಕೀಯ ಬಿಡಿಎಸ್,. ಎಂಡಿಎಸ್., ಆಯುಷ್ ಕೋರ್ಸ ಬಿ.ಆಯುಶ್., ಎಂ.ಆಯುಷ್, ಇಂಜಿನಿಯರಿಂಗ್ ಹಾಗೂ ತಂತ್ರಜ್ಞಾನ ಕೋರ್ಸಗಳಾದ ಬಿ.ಇ., ಬಿಟೆಕ್., ಎಂ.ಇ, ಎಂ ಟೆಕ್, ಬಿ.ಆರ್ಕಿಟೆಕ್ಟರ್, ಎಂ.ಆರ್ಕಿಟೆಕ್ಟರ್,ಎಂಬಿಎ ಎಂಸಿಎ ಎಲ್‍ಎಲ್‍ಬಿ, ತೋಟಗಾರಿಕೆಯಲ್ಲಿ ಬಿಎಸ್ಸಿ, ಅಗ್ರಿಕಲ್ಚರ್ ಇಂಜಿನೀಯರಿಂಗ್, ಡೈರಿ ಟೆಕ್ನಾಲಾಜಿ, ಫಾರೆಸ್ಟ್ರಿ ಪಶುಸಂಗೋಪನಾ ತಂತ್ರಜ್ಞಾನ ಮೀನುಗಾರಿಕೆ, ರೇಷ್ಮೆ, ಹೊಂ/ ಕಮ್ಮುನಿಟಿ ಸಾಯಿನ್ಸ್, ಬಿ ಫಾರ್ಮಾ, ಎಂ.ಫಾರ್ಮಾ, ಫಾರ್ಮಾ ಡಿ, ಡಿ ಫಾರ್ಮಾ ಕೊರ್ಸಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಆನಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಈ ಹಿಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಯಾಗಿದ್ದು, ಬೇರೆ-ಬೇರೆ ವರ್ಷಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಅರಿವು ವಿದ್ಯಾಭ್ಯಾಸ ಸಾಲ ಪಡೆಯದಿದ್ದಲ್ಲಿ ಅಂತಹ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ದಿನಾಂಕ : 22-08-2023 ಕೊನೆಯ ದಿನಾಂಕವಾಗಿದ್ದು ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ, ಮೌಲಾನಾ ಆಝಾದ ಭವನ, ಜಿಲ್ಲಾ ಪಂಚಾಯತ್ ರಸ್ತೆ, ಕನಕದಾಸ ಬಡಾವಣೆ, ವಿಜಯಪುರ ದೂ: 08352-278344ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)