ವಿಜಯಪುರ

ಚಂದ್ರಯಾನ-3 ಯಶಸ್ವಿ; ಶಾಸಕ ಬಸನಗೌಡ ಪಾಟೀಲ ಯತ್ನಾಳ ಏನಂದ್ರು?

ಸರಕಾರ ನ್ಯೂಸ್‌ ಬೆಂಗಳೂರ

ಭಾರತದ ಚಂದ್ರಯಾನ-3 ಯಶಸ್ಸು, ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವ ಸಂಭ್ರಮದ ಘಳಿಗೆ ಎಂದು ಶಾಸಕ ಬಸನಗೌಡ ರಾ ಪಾಟೀಲ ಯತ್ನಾಳ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಚಂದ್ರನ ದಕ್ಷಿಣ ದೃವ ದಲ್ಲಿ ಯಶಸ್ವಿಯಾಗಿ ವಿಕ್ರಮ್ ಲ್ಯಾಂಡರ್ ಇಳಿಯುವ ಮೂಲಕ ಇಸ್ರೋ ವಿಜ್ಞಾನಿಗಳ ಕಠಿಣ ಪರಿಶ್ರಮಕ್ಕೆ ಹಾಗೂ ಕೊಟ್ಯಂತರ ಜನರ ಪ್ರಾರ್ಥನೆಗೆ ಫಲ ಸಿಕ್ಕಂತಾಗಿದೆ. ಇತಿಹಾಸ ಸೃಷ್ಟಿಸುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ವಿಶ್ವಗುರು ಆಗಿ ರಾರಾಜಿಸಲಿದೆ ಎಂದಿದ್ದಾರೆ.

ಕಾರ್‌ನಲ್ಲಿ ಬಂದು ಚಾಕು ತೋರಿಸಿದರು, ಕೈ-ಕಾಲು ಕಟ್ಟಿ ಹೊತ್ತೋಯ್ದರು, ಹೊಡಿ-ಬಡಿ ಮಾಡಿ ಹಣ ಕೇಳಿದರು……ಮುಂದೇನಾಯ್ತು?

140 ಕೋಟಿ ಭಾರತೀಯರ ಕನಸು ನನಸಾದ ಐತಿಹಾಸಿಕ ದಿನವಾನದ ಇಂದು, ಇಡೀ ಜಗತ್ತು ಭಾರತದತ್ತ ನಿಬ್ಬೆರಗಾಗುವಂತೆ ನೋಡುತ್ತಿದೆ. ಅದಕ್ಕೆ ಕಾರಣಿಕರ್ತರಾದ ಹೆಮ್ಮೆಯ ಇಸ್ರೋ ವಿಜ್ಞಾನಿಗಳಿಗೆ ಹಾಗೂ ಈ ಮಹತ್ತ ಕಾರ್ಯಕ್ಕೆ ಪ್ರೋತ್ಸಾಹ, ಸಹಕಾರ ನೀಡಿದ ಹೆಮ್ಮೆ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು ಎಂದಿದ್ದಾರೆ.

ಚಂದ್ರಯಾನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶ ಭಾರತ ಎಂದು ಹೇಳುವುದಕ್ಕೆ ಪ್ರತಿಯೊಬ್ಬ ಭಾರತೀಯನಿಗೆ ಹೆಮ್ಮೆ ಆಗುತ್ತಿದೆ ಎಂದು ಸಂತಸ ವ್ಯಕ್ತ ಪಡಿಸಿದ್ದಾರೆ.

(ಕ್ಷಣ ಕ್ಷಣದ ಮಹತ್ವದ ಸುದ್ದಿಗಾಗಿ ಸರಕಾರ ನ್ಯೂಸ್‌ ಸಬ್‌ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!