ವಿಜಯಪುರ

ಕಾರ್‌ನಲ್ಲಿ ಬಂದು ಚಾಕು ತೋರಿಸಿದರು, ಕೈ-ಕಾಲು ಕಟ್ಟಿ ಹೊತ್ತೋಯ್ದರು, ಹೊಡಿ-ಬಡಿ ಮಾಡಿ ಹಣ ಕೇಳಿದರು……ಮುಂದೇನಾಯ್ತು?

ಸರಕಾರ ನ್ಯೂಸ್‌ ಸಿಂದಗಿ

ಕಾರ್‌ನಲ್ಲಿ ಬಂದರು, ಚಾಕು ತೋರಿಸಿದರು, ಕೈ ಕಾಲು ಕಟ್ಟಿ ಹೊತ್ತೋಯ್ದರು, ಹೊಡಿ ಬಡಿ ಮಾಡಿ ಹಣ ಕೇಳಿದರು, ಕೊಡದಿದ್ದಕ್ಕೆ ಮತ್ತೆ ಹೊಡೆದರು…..ಯಾರು ಇವರೆಲ್ಲ, ಯಾಕೆ ಹೊಡೆದರು? ಏನು ಬೇಕಿತ್ತು? ಇವರಿಗೆ……ಕೊನೆಗೆ ಆಗಿದ್ದಾದರೂ ಏನು? ಇಲ್ಲಿದೆ ಇಂಟ್ರೆಸ್ಟಿಂಗ್‌ ಕ್ರೈಮ್‌ ಸ್ಟೋರಿ…..

2023 ಆ.18ರಂದು ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮದಿಂದ ಟಿವಿಎಸ್‌ ಎಕ್ಸಲ್‌ ಸೂಪರ್‌ ಮೋಟರ್‌ ಸೈಕಲ್‌ ಮೇಲೆ ಹೊನ್ನಳ್ಳಿಯ ಸಂಬಂಧಿಕರ ಮನೆಯ ಗೃಹ ಪ್ರವೇಶಕ್ಕೆ ಹೊರಟಿದ್ದ ಲಕ್ಷ್ಮಣ ಗೊಲ್ಲಾಳಪ್ಪ ಬಜಂತ್ರಿ ಎಂಬುವನನ್ನು ಕಾರ್‌ನಲ್ಲಿ ಬಂದ ನಾಲ್ಕಾರು ಜನ ಅಡ್ಡಗಟ್ಟಿದ್ದಾರೆ.

ಅದರಲ್ಲಿದ್ದ ಶರಬಣ್ಣ ಬಂಜಂತ್ರಿ ಎಂಬಾತ ಚಾಕು ತೋರಿಸಿ ಹಲಕಟ್ಟಿ ಬೈದು, ರವಿ ಎಂಬಾತನ ಸಹಾಯದೊಂದಿಗೆ ಕಾರ್‌ನಲ್ಲಿ ಎತ್ತಿ ಹಾಕಿದ್ದಾರೆ. ಇವರೊಂದಿಗಿದ್ದ ನಾಲ್ಕೈದು ಜನ ಒದೆಯುತ್ತಾ “ಬೋಸಡಿ ಮಗನೆ ನಿನಗೆ ಒಂದು ಗತಿ ಕಾಣಿಸತೀವಿ” ಎನ್ನುತ್ತಾ ಅಲ್ಲಿಂದ ಹೊರಟು ತಿಪನಟ್ಟಿ ಗ್ರಾಮದ ಸಮೀಪದ ದಾಬಾ ಹತ್ತಿರ ಕರೆದೊಯ್ದು ಅಲ್ಲಿ ಮತ್ತೆ ಹೊಡೆದಿದ್ದಾರೆ. ಅಲ್ಲಿಂದ ಮತ್ತೆ ಹೊರಟು ಸಮೀಪದ ಗುಡಿಯ ಹತ್ತಿರ ಕಾರ್‌ ನಿಲ್ಲಿಸಿ ಅಲ್ಲಿ “ನಿನ್ನ ಅಣ್ಣನ ಮಗ ಗಿರೆಪ್ಪ ಮಲಕಪ್ಪ ಬಜಂತ್ರಿ ಸೂಚನೆ ಮೇರೆಗೆ ಎತ್ತಿಹಾಕಿಕೊಂಡು ಬಂದಿದ್ದೇವೆ” ಎಂದಿದ್ದಾರೆ.

ಬಳಿಕ ಒಂದು ಕೋಣೆಯಲ್ಲಿ ಕೂಡಿ ಹಾಕಿದ್ದಾರೆ. ಅಲ್ಲಿಗೆ ಸುಮಾರು 10 ಜನರೊಂದಿಗೆ ಬಂದ ಮುತ್ತವ್ವ ಎಂಬುವಳು ಚಪ್ಪಲಿಯಲ್ಲಿ ಹೊಡೆಯುತ್ತಾಳೆ. ಅಲ್ಲಿಂದ ಮತ್ತೆ ಕರೆದೊಯ್ದು 10 ಲಕ್ಷ ರೂಪಾಯಿಗೆ ಬೇಡಿಕೆ ಇಡುತ್ತಾರೆ. ಲಕ್ಷ್ಮಣನ ಬಳಿಯಲ್ಲಿದ್ದ 50 ಸಾವಿರ ರೂಪಾಯಿ ಮತ್ತು ಒಂದೂವರೆ ತೊಲೆ ಬಂಗಾರ ಕಿತ್ತುಕೊಳ್ಳುತ್ತಾರೆ. ಅಲ್ಲಿಂದ ವನದುರ್ಗ ಗ್ರಾಮಕ್ಕೆ ಕರೆದೊಯ್ದು, ಒಂದು ರೂಮಿನಲ್ಲಿ ಕೂಡಿಹಾಕಿ 10 ಲಕ್ಷ ರೂಪಾಯಿ ಕೊಡದಿದ್ದರೆ ಜೀವ ಸಹಿತ ಉಳಿಸಲ್ಲ ಎಂದು ಬೆದರಿಕೆ ಹಾಕುತ್ತಾರೆ. ಮರುದಿನ ಅವರಿಗೆ ಒಂದು ಕರೆ ಬರುತ್ತದೆ. ಅದರಲ್ಲಿ ಲಕ್ಷ್ಮಣನ ಹೆಂಡತಿ ಮಕ್ಕಳು ಪೊಲೀಸ್‌ ಠಾಣೆಗೆ ದೂರು ನೀಡಲು ಹೋಗಿದ್ದಾರೆಂಬ ಸಂಗತಿ ತಿಳಿಯುತ್ತಿದ್ದಂತೆ ಲಕ್ಷ್ಮಣನನ್ನು ಬಿಟ್ಟು ಬಿಡುತ್ತಾರೆ.

ಬಳಿಕ ಸಿಂದಗಿಗೆ ಬಂದ ಲಕ್ಷ್ಮಣ ಪೊಲೀಸ್‌ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸುತ್ತಾರೆ. ಜಾಲಗೇರಿಯ ಶರಬಣ್ಣಭೀಮಣ್ಣ ಬಜಂತ್ರಿ, ವನದುರ್ಗದ ರವಿ ಗುರುಪಾದಪ್ಪ ಬಜಂತ್ರಿ, ಯಂಕಂಚಿಯ ಗಿರೆಪ್ಪ ಮಲಕಪ್ಪ ಬಜಂತ್ರಿ, ಗೋಲಗೇರಿಯ ಮುತ್ತವ್ವ ಲಕ್ಷ್ಮಣ ಬಜಂತ್ರಿ, ಲಕ್ಷ್ಮಣ ಹಣಮಂತ ಬಜಂತ್ರಿ, ಕಣಮೇಶ್ವರದ ಮಲ್ಲಪ್ಪ ನಿಂಗಪ್ಪ ಬಜಂತ್ರಿ, ಲಕ್ಷ್ಮಣ ನಿಂಗಪ್ಪ ಬಜಂತ್ರಿ, ಮಾಗಣಗೇರಿಯ ಶರಣಪ್ಪ ಬಸಪ್ಪ ಬಜಂತ್ರಿ, ಜಾಲವಾದಿಯ ಶರಣಮ್ಮ ಹುಲಗಪ್ಪ ಬಜಂತ್ರಿ, ಬೋನಾಳದ ಮಲ್ಲೇಶಪ್ಪ ಬಜಂತ್ರಿ ಹಾಗೂ ಬಾದ್ಯಾಪುರದ ಮುತ್ತಣ್ಣ ಶರಣಪ್ಪ ಬಜಂತ್ರಿ ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಿಸಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

(ಕ್ಷಣ ಕ್ಷಣದ ಕುತೂಹಲದ ಮಾಹಿತಿಗಾಗಿ ಸರಕಾರ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ಮಾಡಿ)

error: Content is protected !!