ನಮ್ಮ ವಿಜಯಪುರ

ಐತಿಹಾಸಿಕ ಗಗನ ಮಹಲ್‌ನಲ್ಲಿ ಹಾವು, ಕಾರ್ಯಾಚರಣೆ ನೋಡಲು ಮುಗಿಬಿದ್ದ ಜನ !

ಸರಕಾರ್ ನ್ಯೂಸ್ ವಿಜಯಪುರ

ಐತಿಹಾಸಿಕ ಗಗನ ಮಹಲ್ ಆವರಣದಲ್ಲಿ ಮಂಗಳವಾರ ಹಾವು ಕಾಣಿಸಿಕೊಂಡಿದ್ದು, ಪ್ರವಾಸಿಗರನ್ನು ಬೆಚ್ಚಿ ಬೀಳಿಸಿತು !

ಬೆಳಗ್ಗೆ ಉದ್ಯಾನಕ್ಕೆ ಆಗಮಿಸಿದ ಸ್ಥಳೀಯರು ಹಾಗೂ ಪ್ರವಾಸಿಗರು ಹಾವು ಕಂಡು ಗಾಬರಿಗೊಂಡರು. ಸ್ಥಳದಲ್ಲಿದ್ದ ಸಿಬ್ಬಂದಿ ಹಾವು ಹೊರಗಟ್ಟಲು ಪ್ರಯತ್ನ ನಡೆಸಿದರು. ಬಳಿಕ ಉರಗ ತಜ್ಞರನ್ನು ಕರೆಯಿಸಿ ಹಾವು ಹಿಡಿಯುವ ಕಾರ್ಯಾಚರಣೆ ಕೈಗೊಳ್ಳಲಾಯಿತು.

ಜಿಲ್ಲಾಧಿಕಾರಿ ಮನೆಯ ಹತ್ತಿರದಲ್ಲಿಯೇ ಇರುವ ಉದ್ಯಾನದಲ್ಲಿ ಹಾವು ಕಾಣಿಸಿಕೊಂಡಿದ್ದರಿಂದ ಜನ ಕುತೂಹಲದಿಂದ ಸ್ಥಳಕ್ಕೆ ಆಗಮಿಸತೊಡಗಿದರು. ಇದರಿಂದ ವಾಹನ ದಟ್ಟಣೆ ಉಂಟಾಯಿತು. ಸ್ಥಳಕ್ಕೆ ಧಾವಿಸಿದ ಪೊಲೀಸ್ ಸಿಬ್ಬಂದಿ ಸಂಚಾರ ದಟ್ಟಣೆ ನಿವಾರಿಸಿದರು. ಹಿಟ್ನಳ್ಳಿಯ ಉರಗ ಸ್ನೇಹಿ ಉಮೇಶ ಮರವೇರಿ ಹಾವು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟರು. ಹಾವು ಹಿಡಿಯುವ ಕಾರ್ಯಾಚರಣೆಯೇ ರೋಚಕವಾಗಿತ್ತು.

( ಕ್ಷಣ ಕ್ಷಣದ ಸುದ್ದಿಗಾಗಿ ರೋಚಕ, ಕುತೂಹಲಭರಿತ ಸುದ್ದಿಗಾಗಿ ಪಕ್ಕದಲ್ಲಿರುವ ಬೆಕ್ ಬಟನ್ ಪ್ರೆಸ್ ಮಾಡಿ ಸರಕಾರ್ ನ್ಯೂಸ್ ಗೆ ಸಬ್ ಸ್ಕ್ರೈಬ್ ಆಗಿ)

error: Content is protected !!