ಹಿರೇಮಸಳಿಯಲ್ಲಿ ಸಂತ ಶ್ರೇಷ್ಠ ಕನಕದಾಸ ಜಯಂತಿ ಆಚರಣೆ
ಸರಕಾರ್ ನ್ಯೂಸ್ ಇಂಡಿ
ಸಂತ ಶ್ರೇಷ್ಠ ಕನಕದಾಸ ಜಯಂತಿಯನ್ನು ಹಿರೇಮಸಳಿ ಗ್ರಾಮದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಸಂತ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ವಿವಿಧ ಸಂಘಟನೆಗಳು, ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಹಿರಿಯರು ಭಾವಚಿತ್ರಕ್ಕೆ ಹೂಮಾಲೆ ಹಾಕಿ ನಮಿಸಿದರು.
ಯುವಕರಾದ ಶರಣಬಸು ಹಂಜಗಿ, ದಯಾನಂದ ಪೂಜಾರಿ, ಮುತ್ತಪ್ಪ ಬಂಗಾರಿ, ಅಶೋಕ ಹಂಜಗಿ, ನಿತ್ಯಾನಂದ ಪೂಜಾರಿ, ಗಣೇಶ ಬಂಗಾರಿ, ಸಾಯಿಕುಮಾರ ಹಂಜಗಿ, ಪ್ರಲ್ಹಾದ ವಾಲೀಕಾರ, ಮಂಜು ಸಂಗೋಗಿ, ಮುದುಕು ಬಂಗಾರಿ, ಯಲ್ಲಾಲಿಂಗ ಹಂಜಗಿ, ಸಂತೋಷ ನರಳಿ, ಗಣೇಶ ಚಿಕ್ಕಮಸಳಿ ಮತ್ತಿತರರಿದ್ದರು.