ವಿಜಯಪುರ

ನಾಗಠಾಣ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ಕೊಡುಗೆ ಏನು? ಗೋಪಾಲ ಕಾರಜೋಳಗೆ ಚರ್ಚೆಗೆ ಆಹ್ವಾನ, ಶಾಸಕ ದೇವಾನಂದ ಹಾಕಿದ ಸವಾಲು ಇಲ್ಲಿದೆ ನೋಡಿ….!

ವಿಜಯಪುರ:  ವಿಧಾನ ಸಭೆ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇರುವಾಗಲೇ ಕ್ಷೇತ್ರಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿಜೇತ ಹಾಗೂ ಪರಾಜಿತ ಅಭ್ಯರ್ಥಿಗಳ ಸವಾಲು-ಜವಾಬು ಶುರುವಾಗಿದೆ !

ಹೌದು, ನಾಗಠಾಣ ವಿಧಾನ ಸಭೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈಚೆಗಷ್ಠೇ ಪರಾಜಿತ ಅಭ್ಯರ್ಥಿ ಗೋಪಾಲ ಕಾರಜೋಳ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಮತ್ತೊಂದು ಬಾರಿ ಸ್ಪರ್ಧೆಗೆ ಅವಕಾಶ ಸಿಗುವ ಇಂಗಿತ ವ್ಯಕ್ತಪಡಿಸಿದ್ದರು. ಅಲ್ಲದೇ ನಾಗಠಾಣ ಕ್ಷೇತ್ರದ ಅಭ್ಯವೃದ್ದಿಗೆ ಬಿಜೆಪಿ ಸಾಕಷ್ಟು ಅನುದಾನ ನೀಡಿದೆ ಎಂದಿದ್ದರು.

ಇದಕ್ಕೆ ಶಾಸಕ ದೇವಾನಂದ ಚವ್ಹಾಣ ತಮ್ಮ ಆಫಿಸೀಯಲ್‌ ಫೇಸ್‌ಬುಕ್‌ ಪೇಜ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದು, “ಡಾ, ಗೋಪಾಲ ಕಾರಜೋಳ ಅವರೆ ನಾಗಠಾಣ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಎಷ್ಟು ಅನುದಾನ ನೀಡಿದೆ ಎಂಬ ವಿಷಯದ ಬಗ್ಗೆ ಮಾಹಿತಿ ನೀಡುತ್ತೇನೆ. ಶಾಸಕರು ನನ್ನೊಂದಿಗೆ ಚರ್ಚೆಗೆ ಬರಲಿ ಎಂದು ತಾವು ಪತ್ರಿಕಾ ಹೇಳಿಕೆ ನೀಡಿರುವುದು ಗಮನಿಸಿದ್ದೇನೆ. ಚರ್ಚೆಗೆ ಸಮಯ ಹಾಗೂ ಸ್ಥಳವನ್ನು ನೀವೇ ನಿಗದಿಪಡಿಸಿ. ತಮಗೆ ಕ್ಷೇತ್ರದಲ್ಲಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ಕೊರತೆ ಇರಬಹುದು. ಅದಕ್ಕಾಗಿ ಈ ಚರ್ಚೆಗೆ ತಮ್ಮ ಜೊತೆ ತಮ್ಮ ತಂದೆಯವರಾದ ಗೋವಿಂದ ಎಂ.ಕಾರಜೋಳ ಅವರನ್ನು ಕರೆತಂದರೆ ತುಂಬಾನೇ ಒಳ್ಳೆಯದುʼ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ಶಾಸಕ ದೇವಾನಂದ ಚವ್ಹಾಣ ಹಾಗೂ ಪರಾಜಿತ ಅಭ್ಯರ್ಥಿ ಗೋಪಾಲ ಕಾರಜೋಳ ನಡುವಿನ ಈ ಸಮರ ಅಭಿವೃದ್ಧಿ ಪರ ಚರ್ಚೆಗೆ ಮುನ್ನುಡಿ ಬರೆದಿದೆ.

error: Content is protected !!